Recent Posts

Sunday, November 17, 2024
ಸುದ್ದಿ

ಗುಜರಾತ್’ನಲ್ಲಿ ಸಿಲುಕಿದ ಪುತ್ತೂರಿನ ಯುವಕರಿಬ್ಬರಿಗೆ 21 ದಿನಗಳಿಂದ ಕಾರೇ ಆಶ್ರಯ ; ಸೂಕ್ತ ವಸತಿ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ , ಗುಜರಾತ್ ನ ವಲ್ಸಾದ್ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ – ಕಹಳೆ ನ್ಯೂಸ್

ಮಂಗಳೂರು, ಏ 14 : ಕೊರೊನಾ ತಡೆಗಟ್ಟಲೆಂದು ಘೋಷಿಸಿದ 21 ಲಾಕ್ ಡೌನ್ ಮತ್ತೆ ಮೇ. ೩ರವರೆಗೆ ವಿಸ್ತರಣೆಯಾಗಿದೆ. ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರೈಲು ಹಾಗೂ ಬಸ್ ಸಂಚಾರ ಸ್ಥಗಿತಗೊಂಡು ಬಹಳಷ್ಟು ಜನ ಕಾರ್ಯನಿಮಿತ್ತ ಪರವೂರುಗಳಿಗೆ ತೆರಳಿ, ತಮ್ಮ ಮನೆ ಊರುಗಳಿಗೆ ಹಿಂತಿರುಗಲಾಗದೆ ಪರದಾಡುತ್ತಿದ್ದಾರೆ. ಹಲವು ಕೂಲಿ ಕಾರ್ಮಿಕರು ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿರುವುದು ದಿನಂಪ್ರತಿ ಸುದ್ದಿಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರವಾಳಿಯ ಪುತ್ತೂರು ಮೂಲದ ಯುವಕರಿಬ್ಬರು ಲಾಕ್ ಡೌನ್ ನಿಂದಾಗಿ ಗುಜರಾತ್- ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮೂರಿಗೆ ಪ್ರಯಾಣ ಮುಂದುವರಿಸಲಾಗದೆ, ಆಶಿಕ್ ಹುಸೇನ್ ಮತ್ತು ಮೊಹಮ್ಮದ್ ಟಕೀನ್ ಮರ್ಲಿ ಎಂಬ ಇಬ್ಬರು ಯುವಕರು ಕಳೆದ 21 ದಿನಗಳಿಂದ ಸೂಕ್ತ ವಸತಿ, ಆಹಾರ ವ್ಯವಸ್ಥೆಗಳಿಲ್ಲದೆ ಕಾರಿನಲ್ಲಿಯೇ ವಾಸಿಸುತ್ತಿದ್ದಾರೆ. ಲಾಕ್ ಡೌನ್ ಮತ್ತೆ 19 ದಿನಗಳ ಕಾಲ ಮುಂದುವರಿದ ಹಿನ್ನಲೆಯಲ್ಲಿ ಮತ್ತೆ ಕಾರಿನಲ್ಲೇ ವಾಸಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಬಗ್ಗೆ ದ.ಕ ಜಿಲ್ಲಾಡಳಿತ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ , ಗುಜರಾತ್ ನ ವಲ್ಸಾದ್ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ನಮ್ಮ ಜಿಲ್ಲೆಯ ಆಶಿಕ್ ಹುಸೇನ್ ಮತ್ತು ಮೊಹಮ್ಮದ್ ಟಕೀನ್ ಮರ್ಲಿ ಎಂಬಿಬ್ಬರು ಯುವಕರು ವಲ್ಸಾದ್ ನ ಬಿಲಾದ್ ತಾಲೂಕಿನ ಅಂರ್ಬೇಗಾವ್ಂ ನ ಆರ್.ಟಿ ಓ ಚೆಕ್ ಪೋಸ್ಟ್ ವ್ಯಾಪ್ತಿಯಲ್ಲಿ ಕಳೆದ 21 ದಿನಗಳಿಂದ ಸೂಕ್ತ ವಸತಿ, ಆಹಾರ ವ್ಯವಸ್ಥೆ ಇಲ್ಲದೆ ಕಾರಿನಲ್ಲೇ ವಾಸಿಸುತ್ತಿದ್ದು ಅವರಿಗೆ ವಸತಿ ಹಾಗೂ ಆಹಾರದ ವ್ಯವಸ್ಥೆ ಮಾಡಬೇಕು ಎಂದು ಪತ್ರದ ಮುಖೇನ ಕೋರಿಕೊಂಡಿದ್ದಾರೆ.