Friday, January 24, 2025
ಸುದ್ದಿ

ಲಾಕ್ ಡೌನ್ ವಿಸ್ತರಣೆ : ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದ್ದ ಪಾಸ್ ಅವಧಿ ಎ.14 ರಿಂದ ಎ.20 ರ ವರೆಗೆ ಮುಂದೂಡಿಕೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾಡಳಿತ ಹೊರ ತಂದಿರುವ ಪಾಸ್ ಅವಧಿ ಮುಂದೂಡಿಕೆಯಾಗಿದೆ. ಅಗತ್ಯ ವಸ್ತುಗಳ ಪೂರೈಕೆದಾರರಿಗೆ, ಮಾಧ್ಯಮ, ಟೆಲಿಕಾಂ, ಶೇರ್ ಮಾರುಕಟ್ಟೆ, ಆಸ್ಪತ್ರೆ ಸಿಬ್ಬಂದಿ ಹಾಗೂ ಇನ್ನಿತ್ತರ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ದ.ಕ ಜಿಲ್ಲಾಡಳಿತ ಎ.14 ರವರೆಗೆ ನೀಡಿದ್ದ ಆನ್ ಲೈನ್ ಹಾಗೂ ಮ್ಯಾನುವೆಲ್ ಪಾಸ್ ಗಳ ಅವಧಿಯನ್ನು ಎ.20ರವರೆಗೆ ಮುಂದುವರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರು ಹಾಗೂ ಪುತ್ತೂರು ಉಪವಿಭಾಗಳ ಸಹಾಯ ಆಯುಕ್ತುಗಳು ಪ್ರಕಟಣೆ ಹೊರಡಿಸಿದ್ದು, ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಸ್ ಗಳನ್ನು ಮರುನವಿಕರಣಗೊಳಿಸಲು ಎಸಿ ಮತ್ತು ಡಿಸಿ ಕಚೇರಿಗೆ ಜನತೆ ಬರುವುದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಕಛೇರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.