Sunday, November 17, 2024
ಸುದ್ದಿ

ಕೊರೊನಾ ಎಫೆಕ್ಟ್ : ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಾದ್ಯಂತ 8 ಜಿಲ್ಲೆಗಳು – ದೇಶಾದ್ಯಂತ ಒಟ್ಟು 170 ಜಿಲ್ಲೆಗಳು ” ಹಾಟ್ ಸ್ಪಾಟ್ ” ಎಂದು ಘೋಷಿಸಿದ ಕೇಂದ್ರ ; ದ.ಕ. ಜಿಲ್ಲೆಯಲ್ಲಿ ಮತ್ತಷ್ಟು ಬಿಗಿಯಾದ ಕಾನೂನು ಸುವ್ಯವಸ್ಥೆ – ಕಹಳೆ ನ್ಯೂಸ್

ಮಂಗಳೂರು/ಬೆಂಗಳೂರು : ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಆಧರಿಸಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂದು ವರ್ಗೀಕರಿಸಲಾಗಿದೆ.

ಕೊರೋನಾ ವೈರಸ್​​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಜಾರಿಯಲ್ಲಿದ್ದ ಲಾಕ್​​ಡೌನ್​​ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮೇ 3ನೇ ತಾರೀಕಿನವರೆಗೂ ವಿಸ್ತರಿಸಲಾಗಿದೆ. ಇದೇ ಹೊತ್ತಲ್ಲೇ ಕೇಂದ್ರ ಸರ್ಕಾರ ದೇಶದ 170 ಜಿಲ್ಲೆಗಳನ್ನು ಕೊರೋನಾ ಹಾಟ್ ಸ್ಪಾಟ್ ಎಂದು ಘೋಷಿಸಿದೆ. ಈ ಪೈಕಿ ಕರ್ನಾಟಕದ 8 ಜಿಲ್ಲೆಗಳು ಸೇರಿವೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ, ಬಾಗಲಕೋಟೆ ಮತ್ತು ಧಾರವಾಡವೂ ರಾಜ್ಯದ ಹಾಟ್​​ಸ್ಪಾಟ್​​ ಕೇಂದ್ರಗಳು ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ಸೋಂಕು ಪ್ರಕರಣಗಳು ಆಧರಿಸಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂದು ವರ್ಗೀಕರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಟ್​​ಸ್ಪಾಟ್ ಜಿಲ್ಲೆಗಳು ಎಂದರೇನು?

ಯಾವುದೇ ಪ್ರದೇಶದಲ್ಲಿ 2 ಅಥವಾ ಹೆಚ್ಚು ಜನ ಪಾಸಿಟಿವ್ ಎಂದು ಕಂಡುಬಂದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎನ್ನಲಾಗುತ್ತದೆ. ಈ ಪ್ರದೇಶಗಳಲ್ಲಿ ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಪರವಾನಗಿ ಇರುವ ಆಂಬ್ಯುಲೆನ್ಸ್ ಗಳು ಮಾತ್ರ ಈ ಪ್ರದೇಶದಲ್ಲಿ ಓಡಾಡುತ್ತವೆ. ಆರೋಗ್ಯ ಕಾರ್ಯಕರ್ತರು ಪ್ರತಿದಿನ ಮನೆಮನೆಗೆ ತೆರಳಿ ತಪಾಸಣೆ, ಸ್ವಚ್ಛತೆಯ ಪರೀಕ್ಷೆ ಮಾಡುತ್ತಾರೆ. ನಿಯಮಿತವಾಗಿ ಇಡೀ ಪ್ರದೇಶವನ್ನು ರಾಸಾಯನಿಕ ಬಳಸಿ ಸ್ವಚ್ಛ ಮಾಡಲಾಗುತ್ತದೆ. ಇಡೀ ಪ್ರದೇಶದ ಎಲ್ಲಾ ಜನರನ್ನೂ ತಪಾಸಣೆ ಮಾಡಲಾಗುತ್ತದೆ.

ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ.

ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್ ರೋಗಿಗಳು ಕಂಡುಬರುವುದರ ಜೊತೆಗೆ ಉಳಿದವರಿಗೂ ಹರಡುತ್ತಿರುವ ಪ್ರದೇಶ. ಇಲ್ಲಿ ಜನ ಯಾರೂ ಮನೆಯಿಂದ ಹೊರಬರುವಂತಿಲ್ಲ. ಈ ಪ್ರದೇಶ ಪೂರ್ಣವಾಗಿ ಲಾಕ್ ಆಗಿರುತ್ತದೆ. ಈ ಪ್ರದೇಶದಿಂದ ಯಾರೂ ಹೊರಹೋಗುವುದು, ಒಳಬರುವುದು ನಿಷಿದ್ಧ. ಅಗತ್ಯ ವಸ್ತುಗಳನ್ನು ಕೊಳ್ಳಲು ಕೂಡಾ ಯಾರೂ ಮನೆಯಿಂದ ಹೊರಬರುವಂತಿಲ್ಲ. ಯಾವ ಅಂಗಡಿ-ಮುಂಗಟ್ಟುಗಳೂ ತೆರೆಯುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರ್ಕಾರವೇ ಸರಬರಾಜು ಮಾಡುತ್ತದೆ.ಆರೆಂಜ್ ಜೋನ್- ಪಾಸಿಟಿವ್ ಪ್ರಕರಣಗಳಿವೆ, ಆದರೆ ಪರಿಸ್ಥಿತಿ ಹತೋಟಿಯಲ್ಲಿದೆ. ಹೊಸಾ ಪ್ರಕರಣಗಳು ವರದಿಯಾಗಿಲ್ಲ, ಸೋಂಕು ಹರಡುತ್ತಿಲ್ಲ ಎನ್ನುವಂಥಾ ಪ್ರದೇಶಗಳು. ಇಲ್ಲಿ ಅತ್ಯಗತ್ಯವಾದ ಔಷಧ ಅಂಗಡಿ, ಕ್ಲಿನಿಕ್, ದಿನಸಿ-ತರಕಾರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ. ಅತ್ಯವಶ್ಯವಾದ ವಸ್ತುಗಳನ್ನು ಕೊಳ್ಳಲು ಮಾತ್ರ ಜನ ಮನೆಯಿಂದ ಹೊರಬರಬೇಕು. ಸಾಮಾಜಿಕ ಅಂತರ ಕಡ್ಡಾಯ.

ರಾಜ್ಯದ 8 ‘ಹಾಟ್ ಸ್ಪಾಟ್’ ಜಿಲ್ಲೆಗಳ ಪಟ್ಟಿ

ಬೆಂಗಳೂರು ನಗರ
ಮೈಸೂರು
ಬೆಳಗಾವಿ
ದಕ್ಷಿಣ ಕನ್ನಡ
ಬೀದರ್
ಕಲಬುರ್ಗಿ
ಬಾಗಲಕೋಟೆ
ಧಾರವಾಡ
ಈ ಮೇಲ್ಕಂಡ ಜಿಲ್ಲೆಗಳನ್ನು ಕೊರೊನಾ ಸೋಂಕು ಪ್ರಕರಣಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಜಿಲ್ಲೆಗಳೆಂದು ಘೋಷಿಸಿದೆ. ಇದೀಗ ಘೋಷಣೆಯಾಗಿರುವ ಎರಡನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಮತ್ತಷ್ಟು ಟೈಟ್ ಲಾಕ್ ಡೌನ್ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ.

ಇನ್ನೂ ಇದೇ ಸಂದರ್ಭದಲ್ಲಿ ರಾಜ್ಯದ 11 ಜಿಲ್ಲೆಗಳನ್ನು ಆರೇಂಜ್ ಜೋನ್ ಅಡಿಯಲ್ಲಿ ಸೇರ್ಪಡೆಗೊಳಿಸಿರುವಂತ ಕೇಂದ್ರ ಸರ್ಕಾರ, ಆರೇಂಜ್ ಜೋನ್ ಅಡಿಯಲ್ಲಿ ಈ ಕೆಳಗಿನ ಜಿಲ್ಲೆಗಳನ್ನು ಸೇರ್ಪಡೆಗೊಳಿಸಿದೆ.

ರಾಜ್ಯದ ‘ಆರೆಂಜ್ ಜೋನ್’ ಜಿಲ್ಲೆಗಳ ಪಟ್ಟಿ

ಬಳ್ಳಾರಿ
ಮಂಡ್ಯ
ಬೆಂಗಳೂರು ಗ್ರಾಮಾಂತರ
ಉಡುಪಿ
ದಾವಣಗೆರೆ
ಗದಗ
ತುಮಕೂರು
ಕೊಡಗು
ವಿಜಯಪುರ
ಚಿಕ್ಕಬಳ್ಳಾಪುರ
ಉತ್ತರಕನ್ನಡ
ಇನ್ನೂ ಇವಲ್ಲದೇ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗದಂತ ರಾಜ್ಯದ 11 ಜಿಲ್ಲೆಗಳನ್ನು ಗ್ರೀನ್ ಜೋನ್ ಜಿಲ್ಲೆಗಳೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಪಟ್ಟಿಯಲ್ಲಿ ಸೇರ್ವಡೆಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಹಾಟ್ ಸ್ಪಾಟ್ ಗಳ ಅಡಿಯಲ್ಲಿ 8 ಜಿಲ್ಲೆಗಳು, ನಾನ್ ಹಾಟ್ ಸ್ಪಾಟ್ ಅಥವಾ ಆರೇಂಜ್ ಜೋನ್ ಅಡಿಯಲ್ಲಿ 11 ಜಿಲ್ಲೆಗಳು ಹಾಗೂ ಗ್ರೀನ್ ಸ್ಪಾಟ್ ಆಗಿದೆ 11 ಜಿಲ್ಲೆಗಳು ಸೇರ್ಪಡೆಗೊಂಡಿವೆ.