Monday, November 18, 2024
ಸುದ್ದಿ

ಸೀಜ್ ಆಗಿದ್ದ ವಾಹನಗಳನ್ನ ವಾಪಸ್ ಕೊಡ್ತಾರೆ ಅಂದುಕೊಂಡಿದ್ದ ಸವಾರರಿಗೆ ಬಿಗ್ ಶಾಕ್..! – ಕಹಳೆ ನ್ಯೂಸ್

ಬೆಂಗಳೂರು: ಲಾಕ್​ಡೌನ್​ ಉಲ್ಲಂಘಿಸಿದ್ದ ಹಿನ್ನೆಲೆ ಸೀಜ್​ ಆಗಿದ್ದ ತಮ್ಮ ವಾಹನಗಳು ಇಂದು ಮರಳಿ ಸಿಗುತ್ತವೆ ಅಂತ ಕಾಯುತ್ತಿದ್ದ ವಾಹನ ಸವಾರರಿಗೆ ಬಿಗ್​ ಶಾಕ್​ ಎದುರಾಗಿದೆ.

ಜಪ್ತಿ ಮಾಡುವ ಸಮಯದಲ್ಲಿ ಪೊಲೀಸರು, ಏಪ್ರಿಲ್​​ 14ನೇ ತಾರೀಖು ಬಂದು ನಿಮ್ಮ ವಾಹನಗಳನ್ನ ಮರಳಿ ಪಡೆಯಿರಿ ಎಂದು ಹೇಳಿದ್ದರು. ಆದ್ರೆ ಇಂದು ಬೆಳಗ್ಗೆ ಪ್ರಧಾನಿ ಮೋದಿ, ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಲಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಸೀಜ್ ಮಾಡಿದ ವಾಹನಗಳು ಸದ್ಯಕ್ಕೆ ಸಿಗಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದಲ್ಲಿ ಈಗಾಗಲೇ 29,500 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಕಾರುಗಳು ಸೀಜ್ ಆಗಿವೆ. ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಸಂಪರ್ಕ ಇರೋ ರಸ್ತೆಗಳು‌ ಮಚ್ಚಿದ್ರೂ ವಾಹನಗಳ ಜಪ್ತಿ ಸಂಖ್ಯೆ ಕಡಿಮೆ ಆಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹನಗಳು ಸಿಗ್ತಿಲ್ಲ ಅನ್ನೋದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇನ್ನೊಂದು ಟೆನ್ಶನ್. ಯಾಕಂದ್ರೆ ನಗರ ಪೊಲೀಸರು ಸೀಜ್ ಮಾಡಿದ ಎಲ್ಲಾ ವಾಹನಗಳಿಗೂ PF(ಪ್ರಾಪರ್ಟಿ ಫಾರ್ಮ್) ಹಾಕಿದ್ದಾರೆ. ಪ್ರಾಪರ್ಟಿ ಫಾರ್ಮ್ ಹಾಕಿದ್ರೆ ಕೋರ್ಟ್​​ಗೆ ಹೋಗಿ‌ ವಾಹನ ಬಿಡಿಸಿಕೊಳ್ಳಬೇಕಾಗುತ್ತೆ.

ಸೀಜ್ ಆಗಿರೋ ವಾಹನಗಳ ಪೈಕಿ ಸುಮಾರು 10 ಸಾವಿರ ವಾಹನಗಳಿಗೆ ದಾಖಲೆಗಳೇ ಇಲ್ಲ. ಈಗ ದಾಖಲೆಗಳು ಇಲ್ಲದೆ ಇರೋ ವಾಹನಗಳು ಕೈಗೆ ಸೇರೋದೆ ಡೌಟು. ಲಾಕ್ ಡೌನ್ ಆದಾಗಿನಿಂದಲೂ ಸೀಜ್ ಮಾಡಿರೋ ವಾಹನಗಳಿಗೆ ಆಯಾ ಇನ್ಸ್​​ಪೆಕ್ಟರ್​​ಗಳ ನೇತೃತ್ವದಲ್ಲಿ ಪ್ರಾಪರ್ಟಿ ಫಾರ್ಮ್​​ ಹಾಕಲಾಗಿದೆ. ಹೀಗಾಗಿ ಗಾಡಿ ಡಾಕ್ಯುಮೆಂಟ್ಸ್ ಇಲ್ಲ ಅಂದ್ರೆ ವಾಹನವನ್ನ ಮರೆಯಬೇಕಾಗುತ್ತೆ.