Monday, November 18, 2024
ಸುದ್ದಿ

ಹತ್ತೂರಿನ ಒಡೆಯ ಮಹಾಲಿಂಗೇಶ್ವರನ ಅವಭೃತಕ್ಕೆ ದೇವರಮಾರು ಗದ್ದೆಯಲ್ಲೇ ಕೇವಲ 8 ಅಡಿ ಆಳದಲ್ಲಿ ಉಕ್ಕಿದ ಜಲಧಾರೆ ” ಮರುಕಳಿಸಿದ ಮುತ್ತೂರಿನ ಇತಿಹಾಸ, ಇದು ಮಹಾಲಿಂಗೇಶ್ವರನ ಲೀಲೆ ” – ಕಹಳೆ ನ್ಯೂಸ್‌

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರೆ ಕೊರೋನಾ ಲಾಕ್ ಡೌನ್ ನಿಂದಾಗಿ ಸರಳ ಮತ್ತು ಆಗಮಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು ಇದೀಗ ಶ್ರೀ ದೇವರ ಅವಭೃತ ಸ್ನಾನಕ್ಕೆಂದು ದೇವಳದ ಎದುರು ಗದ್ದೆಯಲ್ಲಿ ತಾತ್ಕಾಲಿಕವಾಗಿ ತೋಡಿದ ಕೆರೆಯಲ್ಲಿ ಕೇವಲ 8 ಫೀಟ್ ಅಡಿಯಲ್ಲೇ ಜಲಧಾರೆ ಕೃಪೆತೋರಿದ ಘಟನೆ ಎ.16 ರಂದು ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಲಧಾರೆಯ ಕೊರತೆ ಇರುವ ಪುತ್ತೂರು ನಗರಸಭೆ ವ್ಯಾಪ್ತಿಗೆ ಕುಡಿಯುವ ನೀರಿಗೂ ಕೂಡಾ ಉಪ್ಪಿನಂಗಡಿ ಕುಮಾರಧಾರ ಹೊಳೆಯ ನೀರನ್ನು ಅವಲಂಭಿಸಬೇಕು. ಅಲ್ಲಿಂದ ಸರಬರಾಜು ಆಗುವ ನೀರು ಪುತ್ತೂರಿನ ಕುಡಿಯುವ ನೀರಿನ ಇಂಗಿತವನ್ನು ಕಡಿಮೆ ಮಾಡುತ್ತದೆ. ಆದರೆ ಮುತ್ತು ಬೆಳೆದ ಕೆರೆಯೆಂದೇ ಪ್ರತೀತಿ ಇರುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಹರಿಧ್ವರ್ಣ ಬಣ್ಣದ ಕೆರೆಯಲ್ಲಿ ಜಲದ್ಭೋವ ಆದ ಕತೆ ದೇವಳದ ಇತಿಹಾಸಕ್ಕೆ ಸಂಬಂಧಿಸಿ ಈಗಲೂ ಪಚಲಿತದಲ್ಲಿದೆ. ಪ್ರಸ್ತುತ ಸಂದರ್ಭದಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಶ್ರೀ ದೇವರ ಅವಭೃತ ಸವಾರಿ ನಡೆಸಲು ಸಾಧ್ಯವಿಲ್ಲದ ಪರಿಣಾಮವಾಗಿ ದೇವಳದ ಮುಂಭಾದ ಗದ್ದೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಗುಡಿ ಬಳಿ ದೇವರ ಅವಭೃತಕ್ಕಾಗಿ ತಾತ್ಕಾಲಿಕ ಕೆರೆಯೊಂದನ್ನು ತೋಡಿದಾಗ ಈ ಬೇಸಿಗೆಯಲ್ಲೂ ಕೇವಲ ೮ ಅಡಿ ಆಳದಲ್ಲಿ ನೀರಿನ ಒರತೆ ಸಿಕ್ಕಿರುವುದು ಶ್ರೀ ದೇವರ ಒಂದು ಪವಾಡಕ್ಕೆ ಸಾಕ್ಷಿಯಾಗಿದೆ. ಮುತ್ತು ಬೆಳೆದ ಕರೆಯಿಂದ ನೂಳು ಹಿಡಿದು ಅಳತೆ ಮಾಡಿದರೆ 200 ಮೀಟರ್ ದೂರದಲ್ಲಿ ಈಗ ತೋಡಿದ ತಾತ್ಕಾಲಿಕ ಕೆರೆ ಇದೆ. ಸಂಜೆ ಹಿಟಾಚಿ ಮೂಲಕ ಕೆರೆ ತೋಡುವ ಕೆಲಸ ಆರಂಭವಾಗಿ ರಾತ್ರಿಯ ಪೂಜೆಯ ಮುಂದೆಯೇ ಕೆರೆಯಲ್ಲಿ ನೀರಿನ ಒರತೆ ಸಿಕ್ಕಿದ್ದು, ಭಕ್ತರಲ್ಲಿ ಹರ್ಷ ಮನೆಮಾಡುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು