Recent Posts

Monday, November 18, 2024
ಸುದ್ದಿ

ಚೀನಾದ Zoom App ಸೇಫ್​ ಅಲ್ಲ, ಬಳಸುವ ಮುಂಚೆ ಹುಷಾರ್..! ; ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡುವ ವಿದ್ಯಾಸಂಸ್ಥೆಗಳಿಗೆ ಕೇಂದ್ರ ಸರಕಾರ ಕ್ಲಾಸ್ – ಕಹಳೆ ನ್ಯೂಸ್

ದೆಹಲಿ : ಇದೀಗ ಕೇಂದ್ರ ಗೃಹ ಇಲಾಖೆ ಜೂಮ್​ ಆ್ಯಪ್​​​ ಸೇಫ್​ ಅಲ್ಲ ಎಂಬ ಮಾಹಿತಿಯನ್ನು ಹೊರಡಿಸಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.

ಕೊರೋನಾ ಲಾಕ್​ ಡೌನ್​ ಅವಧಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಮಾ.3 ರವರೆಗೆ ಲಾಕ್ ಡೌನ್ ಆದೇಶವನ್ನು ಹೊರಡಿಸಿದೆ. ಹಾಗಾಗಿ ಜನರು ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೊಂದೆಡೆ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿವೆ. ಈ ಸಂದರ್ಭದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಾಠ ಮಾಡಲು ಜೂಮ್ ಅಪ್ಲಿಕೇಶನ್​ನ ಮೊರೆ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮಾತ್ರವಲ್ಲ, ಮನೆಯಲ್ಲಿಯೇ ಕುಳಿತು ವರ್ಕ್ ಫ್ರಮ್ ಹೋಮ್ ಮಾಡುವ ನೌಕಕರು ಕೂಡ ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಡಿಯೋ ಕಾನ್ಪರೆನ್ಸ್​ ಮೂಲಕ ತಮ್ಮ ಆಫೀಸು ಕೆಲಸವನ್ನು ಮಾಡುತ್ತಿದ್ದಾರೆ.

ಜೂಮ್ ಒಂದು ವಿಡಿಯೋ ಕಾಲಿಂಗ್ ಆ್ಯಪ್. ಒಂದೇ ಬಾರಿಗೆ ಹೆಚ್ಚು ಜನರು ವಿಡಿಯೋ ಕಾಲಿಂಗ್ ಮೂಲಕ ಮಾತನಾಡುವ ಫೀಚರ್ ಇದರಲ್ಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜೂಮ್ ಆ್ಯಪ್ ಅನ್ನು ಅತಿ ಹೆಚ್ಚು ಜನರು ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದಾರೆ.

ಮಾಹಿತಿಗಳ ಪ್ರಕಾರ 50 ಮಿಲಿಯನ್​ಗೂ ಹೆಚ್ಚಿನ ಜನರು ಈ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್​ ಮೊರೆ ಹೋಗುತ್ತಿದ್ದಾರೆ.

ಆದರೆ ಇತ್ತೀಚೆಗೆ ಜೂಮ್​ ಆ್ಯಪ್​ ಬಗ್ಗೆ ಶಾಕಿಂಗ್​ ನ್ಯೂಸ್​ ಹೊರಬಿದ್ದಿದೆ. ಜೂಮ್ ಆ್ಯಪ್ ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡುತ್ತಿದೆ, ಜೊತೆಗೆ ಸೆಕ್ಯೂರಿಟಿ ಬಗ್ ಇದರಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಬಳಕೆದಾರರನ ಧ್ವನಿ, ಇ-ಮೇಲ್ ವಿವರ, ಫೋಟೋ, ವಿಡಿಯೋಗಳನ್ನು ಲೀಕ್ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಬರೆಂಡ್ ಗೆಹ್ರೆಲ್ಸ್ ಎಂಬಾತ ಜೂಮ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು. ಈ ವೇಳೆ 995 ಜನರ ಹೆಸರು, ಫೋಟೋ ಮತ್ತು ಇ-ಮೇಲ್ ವಿವರ ನನ್ನ ಅಕೌಂಟಿನಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಸಾವಿರ ಜನರ ಮಾಹಿತಿಗಳು ದೊರೆತಾಗ ನಾನು ಅದನ್ನು ಪರಿಶೀಲಿಸಿದೆ ಆದರೆ ಆವರು ಯಾರು ನನಗೆ ಪರಿಚಯದವರಾಗಿರಲಿಲ್ಲ ಎಂದು ಹೇಳಿದ್ದಾರೆ. ನಂತರ ನನ್ನ ಸ್ನೇಹಿತನಿಗೂ ಕೂಡ ಜೂಮ್​ ಅಪ್ಲಿಕೇಶನ್​ನನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಇದೀಗ ಕೇಂದ್ರ ಗೃಹ ಇಲಾಖೆ ಕೂಡ ಜೂಮ್​ ಆ್ಯಪ್​​​ ಸೇಫ್​ ಅಲ್ಲ ಎಂಬ ಮಾಹಿತಿಯನ್ನು ಹೊರಡಿಸಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.