ಮಂಗಳೂರು, ಎ.17 : ನೇತ್ರಾವತಿ ಸೇತುವೆ ಬಳಿ ಹೆಡ್ ಲೈಟ್ ಉರಿಸಿ ಬಾಗಿಲು ತೆರೆದ ಸ್ಥಿತಿಯಲ್ಲಿ ಕಾರೊಂದು ಎ.15 ರ ಬುಧವಾರ ರಾತ್ರಿ ಪತ್ತೆಯಾಗಿದ್ದು, ಕಾರಿನ ಮಾಲಕ ನಾಪತ್ತೆಯಾಗಿದ್ದ ಮೂಲತಃ ಕೊಲ್ಯ ನಿವಾಸಿ ವಿಕ್ರಂ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದೆ.
ಎ.15ರಂದು ರಾತ್ರಿ ಮನೆಮಂದಿ ಟಿ.ವಿ. ವೀಕ್ಷಿಸುತ್ತಿದ್ದ ವೇಳೆ ವಿಕ್ರಮ್ ಕಾರಿನ ಬ್ಯಾಟರಿ ರೀಚಾರ್ಜ್ ಮಾಡಲು ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದು ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು, ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.