Recent Posts

Tuesday, November 19, 2024
ಸುದ್ದಿ

Breaking News : ಸವಣೂರು ಪಟ್ಟಣದಲ್ಲಿ ಲಾಕ್‍ಡೌನ್ ನಿಯಮವನ್ನ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಗಾಗಿ ಮಸೀದಿಗೆ ತೆರಳಿದ್ದವರಿಗೆ ಬಿತ್ತು ಲಾಠಿ ಏಟು – ಕಹಳೆ ನ್ಯೂಸ್

ಹಾವೇರಿ: ಲಾಕ್‍ಡೌನ್ ನಿಯಮವನ್ನ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ಹಾಗೂ ಅಧಿಕಾರಿಗಳು ಲಾಠಿ ರುಚಿ ತೋರಿಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣದ ಎರಡು ಮಸೀದಿಗಳಲ್ಲಿ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೊರಗಡೆಯಿಂದ ಮಸೀದಿಯ ಗೇಟ್ ಹಾಕಿಕೊಂಡು ಒಳಗಡೆ ಪ್ರಾರ್ಥನೆ ಮಾಡಲು ಸಜ್ಜಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ ಹಾಗೂ ಸಿಪಿಐ ಶಶಿಧರ್ ನೇತೃತ್ವದ ತಂಡ ಮಸೀದಿಯಲ್ಲಿದ್ದವರನ್ನ ಹೊರಹಾಕಿ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಪ್ರಾರ್ಥನೆಗೆ ಬಂದಿದ್ದವರು ತಂದಿದ್ದ 10ಕ್ಕೂ ಅಧಿಕ ಬೈಕ್‍ಗಳನ್ನ ಜಪ್ತಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಹಶೀಲ್ದಾರ್ ಹಾಗೂ ಪೊಲೀಸರು ಸಭೆಗಳ ಮೇಲೆ ಸಭೆಗಳನ್ನ ನಡೆಸಿ ತಿಳಿಸಿ ಹೇಳಿದ್ದಾರೆ. ಆದರೂ ಹಠಕ್ಕೆ ಬಿದ್ದವರಂತೆ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೀಗಾಗಿ ಪೊಲೀಸರು ಒಬ್ಬೊಬ್ಬರನ್ನ ಹೊರಹಾಕಿ ಲಾಠಿ ರುಚಿ ತೋರಿಸಿ ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.