Recent Posts

Sunday, January 19, 2025
ಸುದ್ದಿ

Big Breaking : ತೆಲಂಗಾಣ-ಛತ್ತೀಸ್‌ಘಡ ಗಡಿಯಲ್ಲಿ ಕನಿಷ್ಠ 12ನಕ್ಸಲರ ಎನ್‌ಕೌಂಟರ್‌

ಕೊಥಗುಂಡಮ್‌ತೆಲಂಗಾಣ-ಛತ್ತೀಸ್‌ಘಡದ ಗಡಿಭಾಗದಲ್ಲಿರುವ ವೆಂಕಟಾಪುರಂ ಮಂಡಲ್‌ ಎಂಬಲ್ಲಿ ನಕ್ಸಲ್‌ ನಿಗ್ರಹ ಪಡೆ ನಡೆಸಿರುವ ಭಾರೀ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಮಂದಿ ನಕ್ಸಲರನ್ನು ಹತ್ಯೆಗೈಯಲಾಗಿರುವ ಬಗ್ಗೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಂಬಿಂಗ್‌ ವೇಳೆ ನಕ್ಸಲರೊಂದಿಗೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಹಿರಿಯ ಮಾವೋವಾದಿ ನಾಯಕ ಹರಿ ಭೂಷಣ್‌ ಹತ್ಯೆಗೀಡಾಗಿದ್ದಾನೆ ಎಂದು ಶಂಕಿಸಲಾಗಿದೆ. ನಿಖರವಾಗಿ ಸಾವಿನ ಸಂಖ್ಯೆ ಇನ್ನಷ್ಟೆ ತಿಳಿದು ಬರಬೇಕಿದೆ ಎಂದು ಸುಕ್ಮಾದ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಮೀನಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಕ್ಸಲರ ಮೃತ ದೇಹಗಳನ್ನು ತೆಲಂಗಾಣದ ಕೊಥಗುಂಡಮ್‌ ಜಿಲ್ಲೆಯ ಭದ್ರಾಚಲಂನಲ್ಲಿರುವ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.