Tuesday, November 19, 2024
ಸುದ್ದಿ

ಮಂಗಳೂರಿನಲ್ಲಿ ಕ್ವಾರಂಟೈನ್ ಆದೇಶ ಉಲ್ಲಂಘಿಸಿ ತಿರುಗಾಟ ನಡೆಸಿದ್ದಲ್ಲದೆ ಅಪಾರ್ಟ ಮೆಂಟ್ ನ  ಗೋಡೆಗಳಿಗೆ ಉಗಿಯುತ್ತಿದ್ದ ಐವರು ವಿದೇಶಿಗರು ; ಬರ್ಕೆ ಪೊಲೀಸ್ ಠಾಣೆಗೆ ದೂರು – ಕಹಳೆ ನ್ಯೂಸ್

ಮಂಗಳೂರು : ಕ್ವಾರಂಟೈನ್ ನಲ್ಲಿರುವ ಐವರು ವಿದೇಶಿಗರು ಕ್ವಾರಂಟೈನ್ ಆದೇಶ ಉಲ್ಲಂಘಿಸಿ ತಿರುಗಾಟ ನಡೆಸಿದ್ದಲ್ಲದೆ ಅಪಾರ್ಟ ಮೆಂಟ್ ನ  ಗೋಡೆಗಳಿಗೆ ಉಗಿಯುವ ಮೂಲಕ ಆತಂಕ ಸೃಷ್ಠಿಸಿದ ಘಟನೆ ಮಂಗಳೂರರು ನಗರದ ಕೊಡಿಯಲ್ ಬೈಲ್ ನ ಖಾಸಾಗಿ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.

ಮಂಗಳೂರಿನ ಕೊಳೂರು ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ವಿಯೆಟ್ನಾಂ ನಿಂದ ಆಗಮಿಸಿದ್ದ 5 ಮಂದಿ ವಿದೇಶಿಗರು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು.
ಕೊರೊನಾ ಹಿನ್ನಲೆ ಜಿಲ್ಲಾಡಳಿತ ಈ 5 ಮಂದಿ ವಿದೇಶಿಗರನ್ನು ಹೋಂ ಕ್ವಾರಂಟೈನ್ ಮಾಡಿತ್ತು. ಆದರಲ್ಲಿ ಈ ಇಬ್ಬರು ಯುವಕರು ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿ ಅಪಾರ್ಟ್ ಮೆಂಟ್ ಸುತ್ತ ಬೇಕಾಬಿಟ್ಟಿ ತಿರುಗುತ್ತಿದ್ದರು. ಇದರಿಂದ ಆತಂಕ ವ್ಯಕ್ತವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಇಂದು ಅಪಾರ್ಟ್ ನ ಲಿಪ್ಟ್ ನ ಗೊಡೆಗಳಲ್ಲಿ ಉಗಿದಿರುವ ಕುರುಹು ಪತ್ತೆಯಾಗಿದೆ. ಈ ಹಿನ್ನಲೆ ಅಪಾರ್ಟ್ ಮೆಂಟ್ ಅಸೋಶಿಯೇಸನ್ ಅವರು ಸಿಸಿಟಿವಿ ವೀಕ್ಷಿಸಿದಾಗ ಇಬ್ಬರು ವಿದೇಶಿಗರು ಲಿಪ್ಟ್ ನಲ್ಲಿ ಮಾಸ್ಕ್ ತೆಗೆದು ತಿರುಗಾಡುತ್ತಿದ್ದು ಕಂಡು ಬಂದಿದೆ. ಅಲ್ಲದೆ ಲಿಪ್ಟ್ ನ ಒಳಗೆ ಉಗಿದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 
ಈ ಹಿನ್ನಲೆ ಅಪಾರ್ಟ್ ಮೆಂಟ್ ನ ಅಸೋಶಿಯೇಷನ್ ಅವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು 5 ಮಂದಿ ವಿದೇಶಿಗರನ್ನು ವಶಕ್ಕೆ ತೆಗೆದುಕೊಂಡು ಆರೋಗ್ಯ ಪರೀಕ್ಷೆಗಾಗಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುಂದಿನ ಕ್ರಮ ಜರುಗಿಸಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು