Sunday, January 19, 2025
ಅಂಕಣಸುದ್ದಿ

ಡಿಲಿಟ್‌ ಆಗಿದೆ ಸಿಎಂ ಯಡಿಯೂರಪ್ಪ ನಿಖಿಲ್‌ ವಿವಾಹಕ್ಕೆ ಶುಭಕೋರಿದ ಟ್ವೀಟ್‌..! – ಕಹಳೆ ನ್ಯೂಸ್

ಬೆಂಗಳೂರು, ಎ.18 : ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿವಾಹಕ್ಕೆ ಶುಭಕೋರಿದ್ದು ಇದೀಗ ಆ ಟ್ವೀಟ್‌ ಹಾಗೂ ಫೇಸ್‌ಬುಕ್‌ ಪೋಸ್ಟ್‌ಗಳು ಡಿಲೀಟ್‌ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶುಕ್ರವಾರ ರಾಮನಗರ ಜಿಲ್ಲೆಯ ಬಿಡದಿಯ ಕೇತನಾಗಹಳ್ಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಿಖಿಲ್‌ ಹಾಗೂ ರೇವತಿ ವಿವಾಹವು ನಡೆದಿದ್ದು ಇದಕ್ಕೆ ಶುಭಕೋರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ಮ ಸುಮಾರು ೧೨ : ೫೯ ಗಂಟೆಗೆ “ವೈವಾಹಿಕ ಜೀವನಕ್ಕ ಕಾಲಿಟ್ಟಿರುವ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಶುಭಾಷಯಗಳು. ಇವರ ದಾಂಪತ್ಯ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ ಎಂದು” ಟ್ವೀಟ್‌ ಮಾಡಿದ್ದರು.

ಆದರೆ ಸಂಜೆ ವೇಳೆಗೆ ಫೇಸ್‌ಬುಕ್‌ ಹಾಗೂ ಟ್ವೀಟರ್‌ ಎರಡರ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಲಾಗಿದೆ.

ಈ ವಿವಾಹವು ಕೆಲವೇ ಜನರ ಉಪಸ್ಥಿತಿಯಲ್ಲಿ ನಡೆದಿದ್ದು ಸರಳವಾಗಿ ನಡೆದಿದೆ.