Recent Posts

Sunday, January 19, 2025
ಸುದ್ದಿ

ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ – ಕಹಳೆ ನ್ಯೂಸ್

ಭೋಪಾಲ್: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್‍ ಆಗಿದೆ. ಈ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಫ್ಲಾಟ್‍ಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಶಹಪುರ ಪ್ರದೇಶದಲ್ಲಿ ನಡೆದಿದೆ.

53 ವರ್ಷದ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ದೃಷ್ಟಿ ವಿಶೇಷ ಚೇತನ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಫ್ಲಾಟ್‍ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಪತಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಶುಕ್ರವಾರ ಮುಂಜಾನೆ ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

ನಂತರ ಆರೋಪಿ ಫ್ಲಾಟ್ ಬಾಗಿಲು ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಫೋನ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆ ಕಿರುಚಿಕೊಂಡಿದ್ದಾರೆ. ತಕ್ಷಣ ನೆರೆಯವರು ಬಂದು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.