Recent Posts

Sunday, January 19, 2025
ಸುದ್ದಿ

22ರ ಯುವಕನೊಂದಿಗೆ 52ರ ಹರೆಯದ ಖ್ಯಾತ ಫುಟ್ಬಾಲ್ ಪ್ಲೇಯರ್ ನೇಮರ್ ತಾಯಿ ಡೇಟಿಂಗ್ – ಕಹಳೆ ನ್ಯೂಸ್

ಬ್ರೆಸಿಲಿಯಾ: ಪ್ರೀತಿ, ಕಾಮಕ್ಕೆ ಕಣ್ಣಿಲ್ಲ. ಇದಕ್ಕೆ ವಯಸ್ಸಿನ ಅಂತರವೂ ತಿಳಿಯುವುದಿಲ್ಲ ಎಂಬ ಮಾತಿದೆ. ಪ್ರೀತಿಯ ಬಲೆಗೆ ಬಿದ್ದು, ತನಗಿಂತ 10 ವರ್ಷದ ಹಿರಿಯರನ್ನ ಮದುವೆಯಾದ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ 30 ವರ್ಷಗಳ ಅಂತರವಿರುವ ಜೋಡಿ ಡೇಟಿಂಗ್ ನಡೆಸಿರುವ ಬಗ್ಗೆ ಕೇಳಿದ್ದೀರಾ? ಇಲ್ವಾಲ್ಲಾ… ಅಂತಹದೊಂದು ವಿಚಿತ್ರ ಸನ್ನಿವೇಶ ಬ್ರೆಜಿಲ್‍ನ ಖ್ಯಾತ ಫುಟ್ಬಾಲ್ ಪ್ಲೇಯರ್ ನೇಮರ್ ಜೀವನದಲ್ಲಿ ನಡೆದಿದೆ.

ಹೌದು. ಆದರೆ ಡೇಟಿಂಗ್ ನಡೆಸಿದ್ದು 28 ವರ್ಷದ ನೇಮರ್ ಎಂದು ಕೊಂಡ್ರೆ ತಪ್ಪಾಗುತ್ತದೆ. ಇಲ್ಲಿ ಹೇಳ ಹೊರಟಿರುವುದು ನೇಮರ್ ತಾಯಿ ನಾಡಿನ್ ಗೋಂಕಾವ್ಸ್ ಕಥೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾಡಿನ್ ಗೋಂಕಾವ್ಸ್ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಡೇಟಿಂಗ್ ನಡೆಸಿದ್ದಾರೆ. 52ರ ಹರೆಯದ ನಾಡಿನ್ ಗೋಂಕಾವ್ಸ್ 22 ವರ್ಷದ ಟಿಯಾಗೋ ರ್ಯಾಮೋಸ್ ಜೊತೆಗೆ ಡೇಟಿಂಗ್‍ನಲ್ಲಿದ್ದು, ಇದಕ್ಕೆ ನೇಮರ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಶಾಕಿಂಗ್ ವಿಚಾರವೆಂದ್ರೆ ನೇಮರ್‍ಗಿಂತ ಟಿಯಾಗೋ 6 ವರ್ಷ ಚಿಕ್ಕವನಾಗಿದ್ದಾರೆ.

ಗೋಂಕಾವ್ಸ್ ಮತ್ತು ಟಿಯಾಗೋ ಸಂಬಂಧದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಜೋಡಿಯ ನಡುವಿನ ಅಂತರದ ಬಗ್ಗೆ ಅನೇಕರು ಗೇಲಿ ಮಾಡಿದ್ದಾರೆ. ಆದ್ರೆ ನೇಮರ್ ಮಾತ್ರ ಇದಕ್ಕೆಲ್ಲ ಕ್ಯಾರೆ ಎಂದಿಲ್ಲ. ಬದಲಿಗೆ ನೇಮರ್ ತನ್ನ ತಾಯಿ ಮತ್ತು ಹುಡುಗನ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಟಿಯಾಗೋ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಗೋಂಕಾವ್ಸ್ ಗೆ ಕಿಸ್ ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ವಿವರಿಸಲಾಗದ’ ಎಂದು ಬರೆದು, ಲವ್ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಅನ್ನು ಒಂದು ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಗೋಂಕಾವ್ಸ್ ಕೂಡ ಇದೇ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೇಮರ್ ಕೂಡ ಕಮೆಂಟ್ ಮಾಡಿ, ‘ಖುಷ್ಯಾಗಿರು ಅಮ್ಮ, ಲವ್ ಯೂ’ ಎಂದು ತಿಳಿಸಿದ್ದಾರೆ.

ಯಾರು ಈ ಟಿಯಾಗೋ?
ಟಿಯಾಗೋ ಫುಟ್ಬಾಲ್ ಆಟಗಾರ ಅಷ್ಟೇ ಅಲ್ಲದೆ ರೂಪದರ್ಶಿ ಕೂಡ ಹೌದ. ಅವರು 4ಕೆ ಈಸಿ ತಂಡದ ಪರ ಆಡುತ್ತಾರೆ. ನಾರ್ತರ್ನ್ ಫುಟ್ಬಾಲ್ ಅಲಾಯನ್ಸ್ (ಎನ್‍ಎಫ್‍ಎ) ಲೀಗ್‍ನಲ್ಲಿ ಈ ತಂಡವು ಭಾಗವಹಿಸುತ್ತದೆ. ನಾಡಿನ್ ಗೋಂಕಾವ್ಸ್, ವ್ಯಾಗ್ನರ್ ರಿಬೈರೊ ಅವರೊಂದಿಗೆ ಮದ್ವೆ ಆಗಿದ್ದರು. ಆದ್ರೆ 25 ವರ್ಷಗಳ ಬಳಿಕ ಅಂದ್ರೆ 2016ರಲ್ಲಿ ವಿಚ್ಛೇದನ ಪಡೆದಿದ್ದರು.

ವಿಚಿತ್ರವೆಂದ್ರೆ ನಾಡಿನ್ ಗೋಂಕಾವ್ಸ್ ಜೊತೆಗೆ ಡೇಟಿಂಗ್‍ನಲ್ಲಿರುವ ಟಿಯಾಗೋ ನೇಮರ್ ಅವರ ಅಭಿಮಾನಿಯಾಗಿದ್ದಾರೆ. ಈ ವಿಚಾರವನ್ನ ಟಿಯಾಗೋ 2017ರಲ್ಲೇ ನೇಮರ್ ಬಳಿ ಹೇಳಿಕೊಂಡಿದ್ದರಂತೆ.

‘ನಾನು ನಿಮ್ಮ ಅಭಿಮಾನಿ. ಒಂದು ದಿನ ನಿಮ್ಮ ಪಕ್ಕದಲ್ಲಿ ನಿಂತೇ ನಿಲ್ಲುತ್ತೇನೆ. ಆ ನಂಬಿಕೆಯಿದೆ,’ ಎಂದು ಟಿಯಾಗೋ ನೇಮರ್ ಅವರಿಗೆ ಹೇಳಿದ್ದರಂತೆ. ಆದ್ರೆ ಟಿಯಾಗೋ ನೇಮರ್ ತಾಯಿಯ ಜೊತೆಗೆ ಡೇಟಿಂಗ್ ನಡೆಸಿ, ಹೀಗೆ ಪಕ್ಕದಲ್ಲಿ ನಿಲ್ಲುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಕ್ಕಿಲ್ಲ. ಇದನ್ನು ಸ್ವತಃ ನೇಮರ್ ಕೂಡ ಊಹೆ ಮಾಡಿರಲಿಲ್ಲವೆಂದ ಅನಿಸುತ್ತದೆ.