Recent Posts

Sunday, January 19, 2025
ಸುದ್ದಿ

ಬನ್ನಂಜೆ, ಡಾ.ಎನ್ನೆಸ್ಸೆಲ್‌ ಸೇರಿ ಐವರಿಗೆ ಗೌರವ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ.ಎಚ್‌.ಜೆ.
ಲಕ್ಕಪ್ಪಗೌಡ ಹಾಗೂ ಕಸ್ತೂರಿ ಬಾಯರಿ ಅವರಿಗೆ ಪ್ರಶಸ್ತಿ ಲಭಿಸಿದೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

“ಉದಯವಾಣಿ’ಯ ಹಿರಿಯ ಮುಖ್ಯ ಉಪಸಂಪಾದಕ ಎ.ಆರ್‌.ಮಣಿಕಾಂತ್‌ ಹಾಗೂ ಪತ್ರಕರ್ತ ಹ.ಚ.ನಟೇಶಬಾಬು ಅವರ “ಗಿಫೆrಡ್‌’ (ಕಥೆಗಳು) ಅನುವಾದ- 1 (ಸೃಜನಶೀಲ ವಿಭಾಗ) ಕೃತಿಯು ಅತ್ಯುತ್ತಮ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಅಕಾಡೆಮಿಯು ಇದೇ ಮೊದಲ ಬಾರಿಗೆ ನೀಡುತ್ತಿರುವ “ಸಾಹಿತ್ಯಶ್ರೀ’ ಪ್ರಶಸ್ತಿಗೆ ಪ್ರೊ.ಧರಣೇಂದ್ರ ಕುರಕುರಿ, ಫ‌ಕೀರ್‌ ಮಹಮ್ಮದ್‌ ಕಟಾ³ಡಿ,
ಡಾ.ವಿಜಯಶ್ರೀ ಸಬರದ, ಡಾ.ವಿ.ಮುನಿವೆಂಕಟಪ್ಪ, ಡಾ.ನಟರಾಜ ಹುಳಿಯಾರ್‌, ಡಾ.ಕೆ.ಕೇಶವಶರ್ಮ, ಡಾ.ಕರೀಗೌಡ ಬೀಚನಹಳ್ಳಿ, ಪ್ರೊ.ತೇಜಸ್ವಿ ಕಟ್ಟಿàಮನಿ, ಡಾ.ಕಮಲಾ ಹೆಮ್ಮಿಗೆ ಹಾಗೂ ಕಂಚ್ಯಾಣಿ ಶರಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಪ್ರಶಸ್ತಿಗೆ
ಭಾಜನರಾದವರಿಗೆ 25 ಸಾವಿರ ರೂ. ನಗದು, ಪ್ರಮಾಣ ಪತ್ರದ ಜತೆಗೆ ಸನ್ಮಾನಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ಯುತ್ತಮ ಕೃತಿ ಪ್ರಶಸ್ತಿಗೆ ಪಾತ್ರವಾದ ಕೃತಿಗಳ ವಿವರ ಹೀಗಿದೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಕಾವ್ಯ: ಗಾಯಗೊಂಡಿದೆ ಗರಿಕೆಗಾನ- ಕೃಷ್ಣಮೂರ್ತಿ ಬಿಳಿಗೆರೆ. ಯುವಕವಿಗಳ ಪ್ರಥಮ ಸಂಕಲನ: ಕಸಬಾರಿಗೆ ಪಾದ- ಬಸವರಾಜ ಹೃತ್ಸಾಕ್ಷಿ. ಕಾದಂಬರಿ: ವೈವಸ್ವತ- ರೇಖಾ ಕಾಖಂಡಕಿ. ಸಣ್ಣಕತೆ: ಬ್ರಹ್ಮರಾಕ್ಷಸ- ಜಯಪ್ರಕಾಶ ಮಾವಿನಕುಳಿ.  ನಾಟಕ:
ಬಕಾವಲಿಯ ಹೂ- ಸುಧೀರ್‌ ಅತ್ತಾವರ್‌. ಲಲಿತ ಪ್ರಬಂಧ: ಮಿಸಳ್‌ ಭಾಜಿ- ಭಾರತಿ ಬಿ.ವಿ. ಪ್ರವಾಸ ಸಾಹಿತ್ಯ: ಯುರೋಪ್‌ನ ಧಾರ್ಮಿಕ ನೆಲೆಗಳು- ಡಾ.ಬಿ.ಎಸ್‌.ತಲ್ವಾಡಿ. ಜೀವನಚರಿತ್ರೆ: ಕಣ್ಣಾಮುಚ್ಚೇ ಕಾಡೇಗೂಡೆ- ಪ್ರೀತಿ ನಾಗರಾಜ್‌. ಸಾಹಿತ್ಯ ವಿಮರ್ಶೆ:
ಕನ್ನಡ ಕಾವ್ಯ ಮೀಮಾಂಸೆ- ಡಾ.ಎಸ್‌.ನಟರಾಜ ಬೂದಾಳು. ಗ್ರಂಥ ಸಂಪಾದನೆ: ತಿಂತಿಣಿ ಮೌನೇಶ್ವರರ ವಚನಗಳು- ಡಾ.ವೀರೇಶ ಬಡಿಗೇರ. ಮಕ್ಕಳ ಸಾಹಿತ್ಯ: ಶ್ರಮಯೇವ ಜಯತೆ- ನಿರ್ಮಲಾ ಸುರತ್ಕಲ್‌.

ವಿಜ್ಞಾನ ಸಾಹಿತ್ಯ: ಅಂತರ್ಜಲ ಬಳಕೆ- ಡಾ.ಎ.ಎಸ್‌. ಕುಮಾರಸ್ವಾಮಿ. ಮಾನವಿಕ- ದಲಿತ ಚಳವಳಿ ನಿನ್ನೆ- ಇಂದು- ನಾಳೆ- ಡಾ.ಸಣ್ಣರಾಮ.

ಸಂಶೋಧನೆ: ಬೌದಟಛಿ ಧರ್ಮ ದರ್ಶನ- ಡಾ. ಶರತ್‌ಚಂದ್ರ ಸ್ವಾಮಿಗಳು. ಅನುವಾದ-2 (ಸೃಜನೇತರ):
ಅಲ್ಲಾಹ್‌ನಿಂದ ನಿರಾಕೃತರು- ಎಂ.ಅಬ್ದುಲ್‌ ರೆಹಮಾನ್‌ ಪಾಷ. ಸಂಕೀರ್ಣ: ನಮ್ಮ ಮನೆಗೂ ಬಂದರು ಗಾಂಧೀಜಿ! ಕೆಲವು ನೆನಪುಗಳು- ರಾಜೇಶ್ವರಿ ತೇಜಸ್ವಿ. ಲೇಖಕರ ಮೊದಲ ಕೃತಿ: ಮನಸು ಅಭಿಸಾರಿಕೆ (ಕಥೆಗಳು)- ಶಾಂತಿ ಕೆ. ಅಪ್ಪಣ್ಣ.
ಅಕಾಡೆಮಿಯು ಕೆಲ ಸಾಹಿತ್ಯ ಪ್ರಕಾರಗಳಿಗೆ ನೀಡುವ ದತ್ತಿ ಬಹುಮಾನಗಳನ್ನು ಪ್ರಕಟಿಸಿದೆ. ಕಾವ್ಯ- ಹಸ್ತಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ): ಎರಡು ನಂಬರಿನ ಟಿಕಲಿ- ಚೈತ್ರಿಕಾ ಶ್ರೀಧರ ಹೆಗಡೆ. ಕಾದಂಬರಿ (ಚದುರಂಗ ದತ್ತಿನಿಧಿ
ಬಹುಮಾನ): ಕಾಡಂಕಲ್‌ ಮನೆ- ಮುಹಮ್ಮದ್‌ ಕುಳಾಯಿ. ಆತ್ಮಕತೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ): ಜೀವಾತ್ಮ ಜೈತ್ರಯಾತ್ರೆ- ಡಾ.ಗುರುಪಾದ ಕೆ. ಹೆಗಡೆ. ಸಾಹಿತ್ಯ ವಿಮರ್ಶೆ (ಪಿ.ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ): ಸಾಹಿತ್ಯ ಮತ್ತು ಸಾಹಿತ್ಯೇತರ- ಎಸ್‌.ಶಿವಾನಂದ. ಅನುದಾನ-1 (ಸೃಜನಶೀಲ- ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ): ಒಂಟಿ
ಸೇತುವೆ- ಸ. ರಘುನಾಥ. ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ ಬಹುಮಾನ): ಪಂಚಮುಖ (ಕಾದಂಬರಿ)- ಡಾ.ಕೆ.ಬಿ.ಶ್ರೀಧರ್‌. ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ): ಮೋಹನ್‌ಸ್ವಾಮಿ- ರಶ್ಮಿ
ತೇರದಾಳ.

ನಗರದ ಕನ್ನಡ ಭವನದಲ್ಲಿರುವ ಅಕಾಡೆಮಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಅಕಾಡೆಮಿ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. 60 ವರ್ಷ ಮೀರಿದ ಹಾಗೂ ಸಮಗ್ರ ಸಾಹಿತ್ಯ ಆಧರಿಸಿ 5 ಮಂದಿಯನ್ನು 2017ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ ಎಂದು ಹೇಳಿದರು.

ಪ್ರಶಸ್ತಿಗೆ ಐದು ಮಂದಿಯ ಹೆಸರು ಶಿಫಾರಸು ಮಾಡುವಂತೆ 100 ಮಂದಿಗೆ ಪತ್ರ ಬರೆಯಲಾಗಿತ್ತು. ಅದರಲ್ಲಿ 60 ಮಂದಿ ಪ್ರತಿಕ್ರಿಯೆ ನೀಡಿದ್ದರು. ಹಾಗೆಯೇ ಹಿಂದಿನ ಐದು ವರ್ಷಗಳಲ್ಲಿ ಸಲ್ಲಿಕೆಯಾಗಿರುವ ಸಲಹೆ, ಅಭಿಪ್ರಾಯಗಳನ್ನೂ ಪರಿಶೀಲಿಸಿ ಚರ್ಚಿಸಿ ಅಂತಿಮವಾಗಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.