ಬೆಂಗಳೂರು(ಏ.18): ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಇದರ ಭಾಗವಾಗಿಯೇ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ. ತಮಿಳುನಾಡು, ದೆಹಲಿ, ರಾಜಸ್ಥಾನ, ಆಂಧ್ರಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ, ಪಂಜಾಬ್, ಹರಿಯಾಣ ಎಲ್ಲಾ ರಾಜ್ಯಗಳಲ್ಲೂ ಮದ್ಯದ ಮಳಿಗೆಗಳಿಗೆ ಅಬಕಾರಿ ಅಧಿಕಾರಿಗಳು ಬೀಗಮುದ್ರೆಯನ್ನು ಹಾಕಿದ್ದಾರೆ. ಮೇ 3ನೇ ತಾರೀಕಿನವರೆಗೂ ಮದ್ಯ ಮಾರಾಟ ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಹೀಗಿರುವಾಗ ದೇಶದ ವಿವಿಧೆಡೆ ಮದ್ಯ ಮಾರಾಟ ಮತ್ತೆ ಆರಂಭಿಸುವಂತೆ ಒಂದಷ್ಟು ಜನ ಆತ್ಮಹತ್ಯೆಗೀಡಾದ ಪ್ರಕರಣಗಳು ನಾವು ಕಾಣಬಹುದು. ಇದರ ಮಧ್ಯೆಯೇ ಏಪ್ರಿಲ್ 20ರ ಬಳಿಕ ರಾಜ್ಯದಲ್ಲಿ ಮದ್ಯದ ಮಾರಾಟ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿದ್ದವು. ಇದರಿಂದ ಮದ್ಯ ಪ್ರಿಯರು ಖುಷಿಯಾಗಿದ್ದರು. ಆದರೀಗ ಸಿಎಂ ಬಿ.ಎಸ್ ಯಡಿಯೂರಪ್ಪ ಈ ನಿರ್ಧಾರದಿಂದ ಹಿಂಸರಿದಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಮೇ 3ನೇ ತಾರೀಕಿನವರೆಗೂ ಎಣ್ಣೆ ಮಾರಾಟ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಮದ್ಯದ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಮದ್ಯದ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸುಮಾರು 7 ಜನ ಮದ್ಯ ಪ್ರಿಯರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಹೀಗಾಗಿ ಮದ್ಯಕ್ಕೆ ದಾಸರಾಗಿರುವವರು ಲಾಕ್‌ಡೌನ್ ಮುಗಿದು ಏಪ್ರಿಲ್ 20ರ ನಂತರ ಮದ್ಯದ ಅಂಗಡಿಗಳು ತೆರೆಯುತ್ತಾರೆ ಎಂದು ಕಾಯುತ್ತಿದ್ದಾರೆ.
ಇನ್ನು, ದೇಶದ ಹಲವು ಕಡೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣಗಳ ಕಂಡು ಬಂದಿವೆ. ಇಂತಹ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಜತೆಗೆ ಲಾಕ್ ಡೌನ್ ಸಂದರ್ಭದಲ್ಲಿ ಬಾರ್ ತೆರೆದ ಕಾರಣ ಕಾನೂನಿನ ಪ್ರಕಾರಬಾರ್ನ ಲೈಸೆನ್ಸ್ ರದ್ದುಪಡಿಸುವ ಕೆಲಸಗಳು ಆಗಿವೆ.