Wednesday, November 20, 2024
ಸುದ್ದಿ

ಪುತ್ತೂರು: ಭಾವನಾ ಕಲಾ ಆರ್ಟ್ಸ್ ತಂಡದಿಂದ ಮಹಾಲಿಂಗೇಶ್ವರನ ಕಟ್ಟೆಯನ್ನೇ ಹೋಲುವಂತಹ ಮಂಟಪ ನಿರ್ಮಾಣ- ಕಹಳೆ ನ್ಯೂಸ್

ಪುತ್ತೂರು: ಏಪ್ರಿಲ್ ತಿಂಗಳು ಬಂತೆಂದರೆ ಸಾಕು ಪುತ್ತೂರಿಗರಿಗೆ ಹಬ್ಬವೋ ಹಬ್ಬ. ಪುತ್ತೂರಿನ ಒಡೆಯ ಸೀಮೆಯ ಅಧಿಪತಿ ಮಹಾಲಿಂಗೇಶ್ವರನ ಜಾತ್ರೆಯ ಸಂಭ್ರಮ.

ಏಪ್ರಿಲ್ 10ರಂದು ಧ್ವಜಾರೋಹಣದ ಮೂಲಕ ಪ್ರಾರಂಭವಾಗುವ ಜಾತ್ರೋತ್ಸವವು 6ದಿನಗಳ ಕಾಲ ಪುತ್ತೂರಿನ ಪೇಟೆಯಾದ್ಯಂತ ಸವಾರಿ ನಡೆಸುವುದರ ಮೂಲಕ ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾನೆ ಮಹಾಲಿಂಗೇಶ್ವರ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಬಾರಿ ಕೊರೊನ ಸಾಂಕ್ರಾಮಿಕ ಮಹಾಮಾರಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಸರ್ಕಾರದ ಆದೇಶದಂತೆ ಶ್ರೀ ದೇವರ ಜಾತ್ರೆಯು ಸೀಮಿತ ಅರ್ಚಕರು ಮತ್ತು ಸಿಬ್ಬಂದಿಗಳ ಮೂಲಕ ತಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಹಿನ್ನಲೆಯಲ್ಲಿ ದೇವರ ಪೇಟೆ ಸವಾರಿ ಕೂಡ ರದ್ದಾಗಿತ್ತು. ಪುತ್ತೂರಿನ ವಿಗ್ನೇಶ್ ಆಚಾರ್ಯ ನೇತೃತ್ವದ ಪ್ರಸಿದ್ಧ ಭಾವನಾ ಕಲಾ ಆರ್ಟ್ಸ್ ತಂಡದಿಂದ ತಮ್ಮದೇ ಮನೆಯಲ್ಲಿ ದೇವರ ಕಟ್ಟೆಪೂಜೆಯನ್ನು ಹೋಲುವಂತಹ ಕೃತಕ ಮಂಟಪವನ್ನು ತಮ್ಮ ಸಿಬ್ಬಂದಿಗಳಾದ ಗಣೇಶ್, ವಸಂತ್, ವಿಶಾಲ್ ನೇತೃತ್ವದಲ್ಲಿ ರಚಿಸಲಾಯಿತು. ಸಾಕ್ಷಾತ್ ಮಹಾಲಿಂಗೇಶ್ವರನೇ ಕಟ್ಟೆ ಮೇಲೆ ಕುಳಿತಂತೆ ಈ ಮಂಟಪ ಭಾಸವಾಯಿತು.