Recent Posts

Sunday, January 19, 2025
ಸುದ್ದಿ

ನಾನು ಹುಟ್ಟಿದ್ದು ಭಾರತದಲ್ಲಿ, ಆದರೆ ಪವಿತ್ರ ಮೆಕ್ಕಾದಲ್ಲಿ ಸಾಯಬೇಕೆಂಬ ಆಸೆ ಇದೆ – ಖಾದರ್

ಮಂಗಳೂರು : ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಅನಿವಾಸಿ ಭಾರತೀಯರನ್ನು ಲೋಫರ್ ಎಂದು ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದರು.

ದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಖಾದರ್ ನಾನು ಪವಿತ್ರ ಭಾರತ ದೇಶದಲ್ಲಿ ಹುಟ್ಟಿರಬಹುದು. ಆದರೆ ನನಗೆ ಪವಿತ್ರ ಮೆಕ್ಕಾದಲ್ಲಿ ಸಾಯಬೇಕೆಂಬ ಆಸೆ ಇದೆ ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಅನಿವಾಸಿ ಭಾರತೀಯರನ್ನು ಲೋಫರ್ ಎಂದು ಹೇಳಿಲ್ಲ. ಲೋಫರ್ ರಾಯಲ್ ಹೆಸರು. ನಾನು ಲೋಫರ್ ಎಂದು ಹೇಳಿದ್ದು ನಾನು ಏನು ಮಾಡಬೇಕು, ಏನು ಮಾಡಬಾರದು ಎಂದು ಸೌದಿಯಲ್ಲಿ ಕೂತು ವಾಟ್ಸಪ್, ಫೇಸ್ ಬುಕ್ ನಲ್ಲಿ ಪ್ರಚಾರ ಮಾಡುವವರಿಗೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮಸೀದಿಯ ಉರುಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ನಾನು ಹಿಂದೂಗಳ ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಮಾಡುತ್ತಾರೆ. ಡೋಂಗಿ ಮಾಡಿ ವಿದೇಶಕ್ಕೆ ಹೋಗುತ್ತಾರೆ. ಜನಪ್ರತಿನಿಧಿಯಾಗಿ ಎಲ್ಲಾ ಧರ್ಮದವರ ಕಾರ್ಯಕ್ರಮಕ್ಕೆ ಹೋಗೋದು ನನ್ನ ಧರ್ಮ. ಆ ಲೋಫರ್ ಗಳಿಂದ ನಾನು ಕಲಿಯಬೇಕಾಗಿಲ್ಲ ಎಂದು ಹೇಳಿಕೆ ನೀಡಿದ್ದರು.