ಗಮನಿಸಿ – ದೆಹಲಿ ಹೋಗಿ ಬಂದಿದ್ದ, ಉಪ್ಪಿನಂಗಡಿಯ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಹಿನ್ನಲೆ : ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಈ ಬಸ್ನಲ್ಲಿ ಪ್ರಯಾಣಿಸಿದ್ದರೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ – ಜಿಲ್ಲಾಡಳಿತ ವಿನಂತಿ – ಕಹಳೆ ನ್ಯೂಸ್
ಮಂಗಳೂರು, ಎ.19 : ಮಾರ್ಚ್ 20 ರಂದು ಬೆಂಗಳೂರಿನಿಂದ ಮಂಗಳೂರಿಗೆ ಕೊರೊನಾ ಸೋಂಕು ದೃಢಪಟ್ಟ ಉಪ್ಪಿನಂಗಡಿ ಮೂಲದ 39 ವರ್ಷದ ವ್ಯಕ್ತಿಯು ಸಂಚರಿಸಿದ್ದು ಈ ಖಾಸಗಿ ಬಸ್ನಲ್ಲಿ ಸಂಚಾರ ಮಾಡಿದ್ದ ಎಲ್ಲಾ ಪ್ರಯಾಣೀಕರನ್ನು ವೈದ್ಯಕೀಯ ತಪಾಸಣೆಗೆ ಒಳಗಾಗಲು ದ. ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಖಾಸಗಿ ಕೆಲಸದ ಕಾರಣದಿಂದಾಗಿ ದೆಹಲಿಗೆ ಹೋಗಿದ್ದ ಈ ವ್ಯಕ್ತಿ ಮಾರ್ಚ್ 20 ರಂದು ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತು ಟ್ರಾವೆಲ್ಸ್ (ಕೆ.ಎ.51 ಎಡಿ 5832) ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು.
ಬಸ್ನಲ್ಲಿ ಒಟ್ಟು 32 ಜನರು ಪ್ರಯಾಣಿಕರಿದ್ದು ಅವರೆಲ್ಲರೂ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.