Tuesday, January 28, 2025
ಸುದ್ದಿ

ಔಷಧಿಗಾಗಿ ಕಿಲೋಮೀಟರ್ ಕಟ್ಟಲೆ ನಡೆದುಕೊಂಡು ಬಂದ ಮಹಿಳೆಯನ್ನು ಪೊಲೀಸ್ ವಾಹನದಲ್ಲೇ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಪುತ್ತೂರು ವೃತ್ತನಿರೀಕ್ಷಕ ‘ ಸೂಪರ್‌ ಕಾಪ್ ‘ ತಿಮ್ಮಪ್ಪ ನಾಯ್ಕ್ – ಕಹಳೆ ನ್ಯೂಸ್

ಪುತ್ತೂರು : ಕಳೆದ ಕೆಲದಿನಗಳ ಹಿಂದೆ ಔಷದಿಗಾಗಿ ಉಪ್ಪಿನಂಗಡಿಯ ನೆಕ್ಕಿಲಾಡಿಯಿಂದ ನಡೆದುಕೊಂಡು ಪುತ್ತೂರಿಗೆ ಬಂದಿದ್ದ 65 ವರ್ಷ ಪ್ರಾಯದ ವಯೋವೃದ್ದೆಯ ಮಾಹಿತಿ ತಿಳಿದ ಪುತ್ತೂರು ನಗರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್‌ ರವರು ಆ ಮಹಿಳೆಯನ್ನು ಇಲಾಖಾ ವಾಹನದಲ್ಲೇ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿರುತ್ತಾರೆ.

ತಿಮ್ಮಪ್ಪ ನಾಯ್ಕ್ ರ ಈ ಮಾನವೀಯ ನಡೆ ತಡವಾಗಿ ಬೆಳಕಿಗೆ ಬಂದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು