Saturday, January 25, 2025
ರಾಜಕೀಯಸುದ್ದಿ

ಸರಕಾರದ ಆದೇಶ ಉಲ್ಲಂಘನೆ ಹಾಗೂ ಜಿಲ್ಲಾಡಳಿತ ಮೇಲೆ ಗೂಬೆ ಕೂರಿಸಿದ್ದ ಉಪ್ಪಿನಂಗಡಿಯ ವ್ಯಕ್ತಿಯ ಪತ್ನಿಗೆ ಹೇಗೆ ಪಾಸಿಟಿವ್ ಆಯಿತು..? ; ತಕ್ಷಣ ಜಿಲ್ಲಾಡಳಿತ ಈತನ ವಿರುದ್ಧ ಪ್ರಕರಣ ದಾಖಲಿಸಬೇಕು – ಶಾಸಕ ಸಂಜೀವ ಮಠಂದೂರು ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು : ದ.ಕ ಜಿಲ್ಲೆಯಲ್ಲಿ ‌ಮತ್ತೊಂದು ಪಾಸಿಟಿವ್ ಪ್ರಕರಣ ‌ಪತ್ತೆಯಾಗಿದೆ. ಎ.16ರಂದು ಪಾಸಿಟಿವ್ ಆಗಿದ್ದ ಉಪ್ಪಿನಂಗಡಿ ನಿವಾಸಿಯ ಪತ್ನಿಗೆ ಸೋಂಕು ತಗಲಿರುವು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಕಹಳೆನ್ಯೂಸ್ ಗೆ ಪ್ರತಿಕ್ರಿಯೆ ನೀಡದ ಪುತ್ತೂರು ಶಾಸಕ ಸಂಜೀವ ಮಠಂದೂರು ಆಕ್ರೋಶ ಹೊರಹಾಕಿದ್ದಾರೆ.

ಹಿನ್ನಲೆ : P325 ಉಪ್ಪಿನಂಗಡಿಯ ಸೋಂಕಿತ ಒಂದು ಆರೋಪವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಮೇಲೆ ಮಾಡಿ ಆಡಿಯೋ ಹರಿಬಿಟ್ಟಿದ ಹಾಗೂ ತಾನು ಸ್ವತಃ ವಕೀಲನಾಗಿದ್ದು, ಸರಕಾರ ಆದೇಶಸಿದಾಗ ತಾನು‌ ಪರೀಕ್ಷೆಗೆ ಬಾರದೇ, ಕಾನೂನಿಗೆ ಅಗೌರವ ತೋರಿದ್ದು, ಸರಕಾರದ ಕಾನೂನು ಉಲ್ಲಂಘನೆ ಮಾಡಿದ್ದಾನೆ. ಹಾಗೂ ತನಗೆ ಕ್ವಾರಂಟೈನ್ ನಲ್ಲಿ ಆಸ್ಪತ್ರೆಯಲ್ಲಿದ್ದ ಸಹವರ್ತಿಯಿಂದ ಪಾಸಿಟಿವ್ ಬಂದಿದ್ದು ಎಂದು ಆತನ ಸಂಬಂಧಿಕರು, ಕೆಲಸ ಮುಖಂಡರೂ ಆರೋಪಿಸಿ ಮನಸೋಯಿಚ್ಛೆ ಹೇಳಿಗಳನ್ನೂ ನೀಡಿದ್ದರು, ಆದರೆ, ಈಗ P325 ಸಂಪರ್ಕದಿಂದ ಪತ್ನಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ. ಈಗ ಈಕೆಗೆ ಹೇಗೆ ಕೊರೊನಾ ಬಂತು..? ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಸುಳ್ಳು ಹೇಳಿ ಜಿಲ್ಲಾಡಳಿತದ ದಾರಿ ತಪ್ಪಿಸಿದ್ದಲ್ಲದೆ, ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಿದ ಈ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಪೋಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಈತನ ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ಮಾಡಿದ್ದು, ಈತನಿಗೂ ಈತನ ಪತ್ನಿಗೂ ಚಿಕಿತ್ಸೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು