Recent Posts

Tuesday, November 26, 2024
ಸುದ್ದಿ

ಲಾಕ್ ಡೌನ್ ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜುಗಾರಿ ಆಟವಾಡುತ್ತಿದ್ದ ಮುಸ್ತಾಫ ಅಲಿಯಾಸ್ ಮುನ್ನ ಸಹಿತ 6 ಮಂದಿ ಅಂದರ್ – ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ವಶಕ್ಕೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಇಂದು ಪೊಲೀಸ್ ನಿರೀಕ್ಷಕರು,ಡಿಸಿಐಬಿರವರು ಬಂಟ್ವಾಳ ತಾಲೂಕು, ತೆಂಕಕಜೆಕಾರು ಗ್ರಾಮದ ಪೈರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವಲ್ಲಿಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಜುಗಾರಿ ಆಟವಾಡುತ್ತಿದ್ದ ಆರೋಪಿಗಳಾದ 1) ಬಂಟ್ವಾಳ ಉಳಿ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಾಫ @ ಮುನ್ನ, ಪ್ರಾಯ: 48 ವರ್ಷ,
2. ಬಂಟ್ವಾಳ ಮೂಡಪಡುಕೊಡಿ ಗ್ರಾಮದ ನಿವಾಸಿ ಹೈದರ್, ಪ್ರಾಯ: 37 ವರ್ಷ, .
3) ಬಂಟ್ವಾಳ ಕಾವಳಪಡೂರು ಗ್ರಾಮದ ನಿವಾಸಿ ಅಬ್ದುಲ್ ನವಾಝ್, ಪ್ರಾಯ: 40
4) ಬಂಟ್ವಾಳ ಬಡಗಕಜೆಕಾರು ಗ್ರಾಮದ ನಿವಾಸಿ ಜಾನ್ ಮೋರಾಸ್, ಪ್ರಾಯ: 44 ವರ್ಷ
5. ಬೆಳ್ತಂಗಡಿ ಸೋಣಂದೂರು ಗ್ರಾಮದ ನಿವಾಸಿ ಶಬೀರ್, ಪ್ರಾಯ: 26 ವರ್ಷ,
6. ಬೆಳ್ತಂಗಡಿ ಮಾಲಾಡಿ ಗ್ರಾಮದ ನಿವಾಸಿ ಲೋಕೇಶ್, ಪ್ರಾಯ: 48 ವರ್ಷ ಎಂಬವರುಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 02,15,100/- ಆಗಬಹುದು. ಇನ್ನುಳಿದಂತೆ 7 ಜನ ಆರೋಪಿಗಳು ಓಡಿಹೋಗಿದ್ದು ಆರೋಪಿಗಳು ಪ್ರಸ್ತುತ ಕೋರೊನಾ ಸಾಂಕ್ರಾಮಿಕ ರೋಗ ಕೋವಿಡ್-19 ನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಜನ ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕೂಡಾ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಆಟವಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ.ಪಿ ಆಕ್ಟ್ & 269, 270 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.