Friday, January 24, 2025
ಸುದ್ದಿ

ಬಂಟ್ವಾಳದ ಮೃತ ಮಹಿಳೆಯ ಭಾವಚಿತ್ರ ಶೇರ್ ಮಾಡಿದರೆ ಹುಷಾರ್..! – ಈಗಾಗಲೇ ಶೇರ್ ಮಾಡಿದವರಿಗೆ ಕಾದಿದೆ ಕಂಟಕ ; ಕೊರೊನಾ ಸೋಂಕಿತ ಫೋಟೋ ಹಾಕಿದ್ರೆ ಕಾನೂನು ರೀತಿ ಕ್ರಮ – ಎಚ್ಚರಿಕೆ ನೀಡಿದ ಪೋಲೀಸ್ ಜಿಲ್ಲಾ ಅಧೀಕ್ಷಕರು – ಕಹಳೆ ನ್ಯೂಸ್

ಮಂಗಳೂರು : ಈಗಾಗಲೇ ಮಹಾಮಾರಿ ಕೊರೊನ ಖಾಯಿಲೆಗೆ ಬಂಟ್ವಾಳ ಮೂಲದ ಮಹಿಳೆಯೋರ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೆಲವರು ಮಹಿಳೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಈ ರೀತಿ ಭಾವಚಿತ್ರ ವನ್ನು ಜಾಲತಾಣಗಳಲ್ಲಿ ಹರಿಯಬಿಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಇಲಾಖೆಯು ಮಹಿಳೆಯ ಭಾವಚಿತ್ರ ಹರಡುತ್ತಿರುವವರ ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯ ಅಂಥವರನ್ನು ಕಾನೂನಿನ ಅಡಿಯಲ್ಲಿ ಒಳಪಡಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಆದ್ದರಿಂದ ಕೂಡಲೇ ಮಹಿಳೆಯ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಮಾಹಿತಿ ಪೊಲೀಸ್ ಇಲಾಖೆಯಿಂದ ಹೊರಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು