Friday, January 24, 2025
ಸುದ್ದಿ

ಬೆಂಗಳೂರು ಪಾದರಾಯನಪುರದಲ್ಲಿ ಪುಂಡಾಟ : ಕ್ವಾರಂಟೈನ್ ಗೆ ಕೇಳಲು ಹೋದ ಪೊಲೀಸರ ಮೇಲೆ ಹಲ್ಲೆ  – ಕಹಳೆ ನ್ಯೂಸ್

ಬೆಂಗಳೂರು(ಏ. 19) ಕ್ವಾರಂಟೈನ್ ಆಗಬೇಕು ಎಂದು ಕೇಳಿಕೊಳ್ಳಲು ಹೋದವರ ಮೇಲೆ ಹಲ್ಲೆಯಾಗಿದೆ. ಪಾದರಾಯನಪುರ ಸ್ಥಳೀಯರು ರೌಡಿಗಳ ರೀತಿ ವರ್ತನೆ ಮಾಡಿದ್ದಾರೆ. ಪುಂಡಾಟ ನಡೆಸಿ ಎಲ್ಲವನ್ನು ಧ್ವಂಸ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಕುರ್ಚಿ ಟೇಬಲ್ ಗಳನ್ಬೇ ಎಸೆದು ದರ್ಪ ಮೆರೆದಿದ್ದಾರೆ. ಕೆಎಸ್ ಆರ್ ಪಿ ತುಕಡಿಯನ್ನು ಈಗ ನಿಯೋಜನೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೆಂಡಲ್ ನಲ್ಲಿದ್ದ ಟೇಬಲ್ ಗಳನ್ನ ಎಸೆದು ಗೂಂಡಾಗಿರಿ ನಡೆಸಿದ್ದಾರೆ. ಪುಂಡಾಟ ಕಂಡು ಪೊಲೀಶರೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಏರುತ್ತಲೇ ಇದ್ದು ನಿಯಂತ್ರಣಕ್ಕೆ ಸರ್ಕಾರ ಮತ್ತು ಆಡಳಿತ ಹರಸಾಹಸ ಮಾಡುತ್ತದೆ. ಅದೆಲ್ಲದರ ನಡುವೆ ಇಂಥ ಪುಂಡರ ಕಾಟವನ್ನು ತಡೆದುಕೊಳ್ಳಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾದರಾಯನಪುರದಲ್ಲಿ ಸೆಕೆಂಡರಿ ಕಾಟ್ಯಾಂಕ್ಟ್ ನಲ್ಲಿದ್ದವರನ್ನು ಲಿಸ್ಟ್ ಸಿದ್ಧವಾಗಿತ್ತು. ಒಟ್ಟಾರೆ 58 ಜನರ ರನ್ನು ಕ್ವಾರಂಟೈನ್ ಮಾಡಲು ಸ್ಥಳೀಯ ಹೊಟೇಲ್ ನಲ್ಲಿ ಸಿದ್ದತೆ ಮಾಡಲಾಗಿತ್ತು. ಈ ಹಿನ್ನಲೆ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ತೆರಳಿದ್ದರು. 15 ಜನರು ತಾವಾಗಿಯೇ ಕ್ವಾರಂಟೈನ್ ಇರುವುದಾಗಿ ಸಿಬ್ಬಂದಿ ಜತೆಗೆ ಬಂದಿದ್ದಾರೆ.

ಉಳಿದವರು ಸ್ಥಳೀಯ ಶಾಸಕರು ಬಂದ ನಂತ್ರ ಅವರೊಂದಿಗೆ ಚರ್ಚಿಸಿ ಕ್ವಾರಂಟೈನ್ ತೆರಳುವುದಾಗಿ ತಿಳಿಸಿದ್ದಾರೆ. ಒಮ್ಮೆಲೆ ನೂರಾರು ಜನರು ಜಮಾವಣೆಗೊಳ್ಳಲು ಸಾಧ್ಯತೆ ಹಿನ್ನಲೆ ಜನರು ಸೇರಲು ಅನುಮಾಡಿಕೊಡಲಿಲ್ಲ ನಾಳೆ ಉಳಿದ 33 ಜರನ್ನ ಕ್ವಾರೆಂಟೈನ್ ಗೆ ಪಡೆಯಲಾಗತ್ತೆ. ಘಟನೆ ಸಂಬಂಧ ಯಾರ್ಯಾರು ಗೂಂಡಾ ವರ್ತನೆ ನಡೆಸಿದ್ದಾರೆ ಪಟ್ಟಿ ಮಾಡಿ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗತ್ತೆ ಎಂದು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ.