Thursday, January 23, 2025
ಸುದ್ದಿ

‘ಪೊಲೀಸ್ ಇಲಾಖೆಯವರು ನನ್ನನ್ನು ಪ್ರೀತಿಯಿಂದ ನೋಡಿಕೊಂಡರು, ನನ್ನ ಜೀವಕ್ಕಾಗಿ ನರ್ಸ್, ವೈದ್ಯರು ತಮ್ಮ ಜೀವ ಪಣಕ್ಕಿಟ್ಟದ್ದರು’ – ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟುವಿನ ಗುಣಮುಖ ವ್ಯಕ್ತಿಯ ಭಾವುಕ ನುಡಿ ವೈರಲ್ – ಕಹಳೆ ನ್ಯೂಸ್

ಮಂಗಳೂರು, ಏ 20 : “ಪೊಲೀಸ್ ಇಲಾಖೆಯವರು ನನ್ನನ್ನು ಪ್ರೀತಿಯಿಂದ ನೋಡಿಕೊಂಡರು, ಕೊರೊನಾ ಪೀಡಿತನಾಗಿದ್ರೂ, ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು, ನನ್ನ ಜೀವಕ್ಕಾಗಿ ವೈದ್ಯರು, ಅಲ್ಲಿನ ನರ್ಸ್ ಗಳು ಎಷ್ಟೊಂದು ಕಷ್ಟ ಪಟ್ಟರು,ಅವರ ಜೀವವನ್ನೇ ಪಣಕ್ಕಿಟ್ಟರು’…ಹೀಗೆ ಮಾತು ಮುಂದುವರಿಸಲಾಗದೆ ಗದ್ಗದಿತರಾದ ತೊಕ್ಕೊಟ್ಟು ಮೂಲಕ ಗುಣಮುಖ ಸೋಂಕಿತವ್ಯ ಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ವೆನ್ಲಾಕ್ ನಲ್ಲಿ ಕೊರೊನಾ ಆಸ್ಪತ್ರೆಯಲ್ಲಿ , ಚಿಕಿತ್ಸೆ ಪಡೆದು ಕಳೆದ ಮೂರು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿ ಬಂದ ತೊಕ್ಕೊಟ್ಟು ಮೂಲದ ವ್ಯಕ್ತಿ ಮನೆಗೆ ಹಿಂತಿರುಗಿದ ವೇಳೆ, ಸೀಲ್ ಡೌನ್ ಪ್ರದೇಶವಾಗಿದ್ದರೂ ಸ್ಥಳೀಯರೆಲ್ಲರೂ ಚಪ್ಪಾಳೆ ಹೊಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಗುಣಮುಖ ವ್ಯಕ್ತಿ, “ಖಾಯಿಲೆ ನೀಡುವುದು ಆ ಅಲ್ಲಾ..,ಇನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನನಗೆ ಒಳ್ಳೆಯ ಚಿಕಿತ್ಸೆ ನೀಡಿದ್ರು, ಆಗ್ಗಾಗೆ ಸಿಬ್ಬಂದಿಗಳು ಬಂದು ನನಗೆ ಯಾವುದೇ ಕುಂದುಕೊರತೆ ನೋಡಿಕೊಂಡರು, ಅವರು ಎಷ್ಟೊಂದು ಕಷ್ಟಪಡುತ್ತಾರೆ, ನಮ್ಮ ಜೀವವನ್ನು ಉಳಿಸಿಲು ಅಲ್ಲಿನ ಡಾಕ್ಟರ್, ನರ್ಸ್ ಗಳು ಎಷ್ಟೊಂದು ಕಷ್ಟ ಪಡುತ್ತಿದ್ದರು, ಪಿಪಿಟಿ ಕಿಟ್ ಧರಿಸಿ ಅವರು ಬೆವರುತ್ತಿದ್ದರು, ಆದರೆ ನಾನು ಕೊರೊನಾದಿಂದ ಸಾಯಬಾರದೆಂದು ನನ್ನ ಜೀವಕ್ಕಾಗಿ ಅವರ ಜೀವ ಪಣಕ್ಕಿಟ್ಟದ್ದರು ಎಂದು ಭಾವಪರವಶರಾಗಿ ಹೇಳಿದ್ದಾರೆ.

 

 

ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಬೆಂಗಳೂರು ಪಾದರಾಯನಪುರದ ಕಿಡಿಗೇಡಿಗಳು ಇದನ್ನು ನೋಡಿ ಪಾಠ ಕಲಿಯಬೇಕಾಗಿದೆ.