ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಬೈಕ್‌ನಲ್ಲಿ ಕಾಸರಗೋಡು ಗಡಿ ದಾಟಲು ಯತ್ನ ; ರಾತ್ರೋರಾತ್ರಿ ಕರವಸ್ತ್ರ ಬಿಸಾಡಿ ಪರಾರಿ – ಸಂಪ್ಯ ಪೊಲೀಸರಿಂದ ತನಿಖೆ – ಬೈಕ್ ವಶಕ್ಕೆ – ಕಹಳೆ ನ್ಯೂಸ್
ಪುತ್ತೂರು : ತಾಲೂಕಿನ ಪಾಣಾಜೆ ಗ್ರಾಮದ ಅರ್ಧ ಮೂಲೆ ಎಂಬಲ್ಲಿ ನಿನ್ನೆ ರಾತ್ರಿ ಸುಮಾರು ಒಂಬತ್ತು ಗಂಟೆಗೆ ಅಪರಿಚಿತ ಬೈಕ್ ನಲ್ಲಿ ಅನುಮಾನಸ್ಪದ ವ್ಯಕ್ತಿಗಳಿಬ್ಬರು ಬಂದಿರುತ್ತಾರೆ. ವಿಚಾರಿಸಿದಾಗ ನಾವು ಮಡಿಕೇರಿಯಿಂದ ಬಂದವರು ನಮಗೆ ಕಾಸರಗೋಡು ಹೋಗಬೇಕು ದಾರಿ ಗೊತ್ತಿದ್ದಲ್ಲಿ ತಿಳಿಸಿ ಎಂದು ಸ್ಥಳೀಯರಲ್ಲಿ ವಿಚಾರಿಸಿ, ಎಲ್ಲಾ ಕಡೆ ಪೊಲೀಸ್ ಬಂದೋಬಸ್ತು ಇರುವುದನ್ನು ತಿಳಿದು ತಮ್ಮ ಬಳಿ ಇದ್ದ ಕರವಸ್ತ್ರವನ್ನು ಬಿಸಾಕಿ ವಾಪಸ್ ಹೋಗಿರುತ್ತಾರೆ.
ಇದರಿಂದ ಸ್ಥಳೀಯರು ಕೋವಿಡ್ 19 ಬಗ್ಗೆ ಆತಂಕಗೊಂಡಿದ್ದಾರೆ. ಬೆಂಗಳೂರು ಮೂಲದ ರಿಜಿಸ್ಟ್ರೇಷನ್ ka51 ಎಸಿ 3357 ಎಂಬ ರೆಂಟ್ ಸ್ಕೂಟಿಯಲ್ಲಿ ಬಂದ ಇವರು ಸ್ಥಳೀಯರಿಗೆ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಆದರೆ ಅದೇ ದ್ವಿಚಕ್ರ ವಾಹನ ಸುಮಾರು ರಾತ್ರಿ 1 ಗಂಟೆ ಸಮಯಕ್ಕೆ ಇದೇ ಅರ್ಧ ಮೂಲೆಯಲ್ಲಿ ಪುನಹ ಸಂಶಯಾಸ್ಪದವಾಗಿ ತಿರುಗಾಡಿದೆ. ಸ್ಥಳೀಯರು ಎದ್ದು ಹುಡುಕಲಾರಂಭಿಸಿದಾಗ ವ್ಯಕ್ತಿಗಳಿಬ್ಬರು ದ್ವಿಚಕ್ರವಾಹನವನ್ನು ಅರ್ಧ ಮೂಲೆ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಈ ಪ್ರಕರಣವು ಅರ್ಧ ಮೂಲೆ ಪರಿಸರದಲ್ಲಿ ಇನ್ನೂ ಹೆಚ್ಚಿನ ಆತಂಕವನ್ನು ಸೃಷ್ಟಿ ಮಾಡಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಂಪ್ಯ ಪೊಲೀಸ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿ ದ್ವಿಚಕ್ರ ವಾಹನವನ್ನು ವಶಪಡಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇಂದು ಇಬ್ಬರನ್ನು ವಶಕ್ಕೆ ಪಡೆದು, ಸಂಪ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಹಾಗೂ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣಾಧಿಕಾರಿ ಭೇಟಿನೀಡಿದ್ದಾರೆ.