Thursday, January 23, 2025
ಸುದ್ದಿ

Breaking News : ಪಾದರಾಯನಪುರದ ಘಟನೆ ಮಾಸುವ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕರ್ತವ್ಯ ನಿರತ ಪುರಸಭಾ ಚಾಲಕನ ಮೇಲೆ ಹಲ್ಲೆಗೆ ಯತ್ನ ; ಆರೋಪಿ ಖಾದರ್ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಪಾದರಾಯನಪುರದ ಘಟನೆ ಮಾಸುವ ಮುನ್ನ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಘಟನೆ ವರದಿಯಾಗಿದೆ.

ಇಂದು ಪರಿಸರ ಅಭಿಯಂತರರು ಬಂಟ್ವಾಳ ಪುರಸಭೆರವರು ಚಾಲಕ ವೀರಪ್ಪ .ಕೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿರವರೊಂದಿಗೆ ಕರ್ತವ್ಯದ ನಿಮಿತ್ತ ಕಾರಿನಲ್ಲಿ ಬಂಟ್ವಾಳ ಕಸಬ ಗ್ರಾಮದ ಬಾರೆಕಾಡು ಎಂಬಲ್ಲಿಗೆ ಮಧ್ಯಾಹ್ನ 1.00 ಗಂಟೆಗೆ ತಲುಪಿದಾಗ ರಫೀಕ್ ಎಂಬವರ ಅಂಗಡಿ ತೆರೆದಿದ್ದು,ಅಂಗಡಿಯ ಎದುರು ಸುಮಾರು 5 ರಿಂದ 10 ಜನರು ಗುಂಪ್ಪಾಗಿ ಸೇರಿರುವುದು ಕಂಡುಬಂದಿದ್ದು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಲಾಕ್ ಡೌನ್ ಇದೆ ಎಂದು ಅಂಗಡಿ ಮುಚ್ಚುವಂತೆ ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಡಿಯನ್ನು ಮುಚ್ಚದೆ ಕೊರೋನಾ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದಿದ್ದರು ಅಂಗಡಿಯನ್ನು ತೆರೆದು ಉದ್ದೇಶ ಪೂರ್ವಕವಾಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆಅಡ್ಡಿ ಪಡಿಸಿರುವ ಕೃತ್ಯ ಇದಾಗಿದೆ ಎಂದು ಅವರಿತ ಅವರು ಅಂಗಡಿ ಮುಚ್ಚಲು ಹೇಳಿದಾಗ ಕಾರಿನ ಚಾಲಕ ವೀರಪ್ಪರವರಿಗೆ ಗುಂಪಿನಲ್ಲಿದ್ದ ಒರ್ವ ವ್ಯಕ್ತಿಯು ಶರ್ಟಿನ ಕಾಲರ್ ನ್ನು ಹಿಡಿದು ಜೀವ ಬೆದರಿಕೆ ಹಾಕಿರುವುದಾಗಿದೆ. ಆ ಸಮಯ ಪೊಲೀಸ್ ಸಿಬ್ಬಂದಿ ರವರು ಹೊಡೆಯುವುದನ್ನು ತಪ್ಪಿಸಿ ಜಗಳ ಬಿಡಿಸಿದ್ದಾರೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಡಿಯ ಮಾಲ್ಹಿಕ ರಫೀಕ್ ಹಾಗೂ ಚಾಲಕ ವೀರಪ್ಪರವರಲ್ಲಿ ದೂರಿನ ಆಧಾರದಲ್ಲಿ ಶರ್ಟಿನ ಕಾಲರ್ ಹಿಡಿದು ಬೆದರಿಕೆ ಹಾಕಿದಾತ ಖಾದರ್ ಎಂದು ತಿಳಿದುಬಂದಿರುತ್ತದೆ.

ಉಳಿದಂತೆ ಹನೀಫ್ , ಬದ್ರು, ಹ್ಯಾರೀಸ್, ಇಮ್ತೀಯಾಜ್, ರೆಹಮತ್ಲು ಎಂದು ತಿಳಿಸಿದ್ದು, ಇವರುಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ : 143,147,269,270,353,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

ಒಟ್ಟಾರೆ ನಮ್ಮ ಕ್ಷೇಮಕ್ಕೆ ಶ್ರಮಿಸುವವರ ಮೇಲೆ ಹಲ್ಲೆ ನಡೆಯುತ್ತಿರುವುದು ನೋವಿನ ಸಂಗತಿ.