Thursday, January 23, 2025
ರಾಜಕೀಯಸುದ್ದಿ

ಪಾಸ್ ದುರ್ಬಳಕೆ ಮಾಡ್ಕೊಂಡು ವಾಹನದಲ್ಲಿ ಮದ್ಯ ಸಾಗಾಟ ; ಕಾಂಗ್ರೆಸ್ ಕಾರ್ಯಕರ್ತರು ಅರೆಸ್ಟ್ – ಕಹಳೆ ನ್ಯೂಸ್

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ತುರ್ತು ಅವಶ್ಯಕ ವಸ್ತುಗಳ ಸಾಗಾಟಕ್ಕೆ ಅವಕಾಶ ನೀಡಿ ಸರ್ಕಾರ ಪಾಸ್ ಗಳನ್ನು ನೀಡಲಾಗಿದೆ. ಆದರೆ ಈ ಪಾಸ್ ಗಳನ್ನೇ ಕಾಂಗ್ರೆಸ್ ಕಾರ್ಯಕರ್ತರು ದುರ್ಬಳಕೆ ಮಾಡಿಕೊಂಡು ಮದ್ಯ ಸಾಗಾಟ ಮಾಡಿ ಸಿಕ್ಕಿಬಿದ್ದಿದ್ದಾರೆ.

ಬಂಧಿತ ವ್ಯಕ್ತಿಗಳು ಕರ್ನಾಟಕ ಮೂಲಕ ಬಸವರಾಜ್ ಶಿಲ್ಲೆ, ತೆಲಂಗಾಣ ಮೂಲದ ಶ್ರವಣ್ ರಾವ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಸ್ ಪಡೆದ ಕಾರಿನಲ್ಲಿ ಹರಿಯಾಣದಿಂದ ದೆಹಲಿಗೆ ಮದ್ಯ ಸಾಗಾಟ ಮಾಡುವಾಗ ಇಬ್ಬರು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿಕ್ಕಿಬಿದ್ದಿದ್ದಾರೆ. ದೆಹಲಿ ಪೊಲೀಸರು ಈ ಇಬ್ಬರನ್ನು ಬಂಧಿಸಿ ಅಬಕಾರಿ ಕಾಯ್ದೆ ಸೆಕ್ಷನ್ 33 ಮತ್ತು 58 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

ಆರೋಪಿಗಳು ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ಅಡಿ ಜನರಿಗೆ ತುರ್ತು ಅವಶ್ಯಕ ವಸ್ತುಗಳು ಸಾಗಾಟ ಮಾಡುವ ಕೆಲಸ ಮಾಡುತ್ತಿದ್ದರು. ಇದೇ ವಿನಾಯಿತಿ ಪಡೆದ ಕಾರಿನಲ್ಲಿ ಹರಿಯಾಣದಿಂದ 12 ಬಾಟಲ್ ಗಳನ್ನು ದೆಹಲಿಗೆ ತರುವಾಗ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾರೆ.