Sunday, November 24, 2024
ಸುದ್ದಿ

ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಮದುವೆಯನ್ನೇ ಮುಂದೂಡಿದ ಇಬ್ಬರು ಮಹಿಳಾ ಪೊಲೀಸರಿಗೆ ಡಿಜಿಪಿ ಅಭಯ್ ಮೆಚ್ಚುಗೆ – ಕಹಳೆ ನ್ಯೂಸ್

ಭುವನೇಶ್ವರ: ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಡಿಶಾದ ಇಬ್ಬರು ಮಹಿಳಾ ಪೊಲೀಸರು ಕೊರೊನಾ ವೈರಸ್ ಹೋರಾಟಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾರೆ.

ಕಾನ್‍ಸ್ಟೇಬಲ್ ಸುನೀತಾ ಅಧಾ ಮತ್ತು ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ವೈರಸ್ ಕರ್ತವ್ಯದಿಂದ ಮಹಿಳಾ ಕಾನ್‍ಸ್ಟೇಬಲ್ ಮತ್ತು ಹೋಮ್ ಗಾರ್ಡ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಅವರನ್ನು ಶ್ಲಾಘಿಸಿದ್ದಾರೆ.

ಇಬ್ಬರು ತಮ್ಮ ತಮ್ಮ ಮದುವೆಗಾಗಿ ರಜೆ ಅರ್ಜಿಸಲ್ಲಿಸಿದ್ದರು. ಆದರೆ ಕಳೆದ ವಾರ ಜಿಲ್ಲೆಯ ಕನಿಷ್ಠ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ಇಬ್ಬರೂ ತಮ್ಮ ಮದುವೆಯನ್ನು ಮೂಂದೂಡುವ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿದರ ಡಿಜಿಪಿ ಅಭಯ್, “ಕಾನ್‍ಸ್ಟೇಬಲ್ ಸುನೀತಾ ಅಧಾ ಅವರ ಮದುವೆ ಏಪ್ರಿಲ್ 25 ರಂದು ನಿಶ್ಚಯವಾಗಿತ್ತು. ಆದರೆ ಒಡಿಶಾದ ಬಿರ್ಮಿತ್ರಪುರ ಪ್ರದೇಶದಲ್ಲಿ ಡ್ಯೂಟಿ ಮಾಡುವ ಮೂಲಕ ತಮ್ಮ ಮದುವೆಯನ್ನು ಮುಂದೂಡಿದ್ದಾರೆ” ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ, “ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ಅವರ ಮದುವೆ ಏಪ್ರಿಲ್ 12 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ” ಎಂದು ಡಿಜಿಪಿ ಅಭಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.