Sunday, November 24, 2024
ರಾಜಕೀಯಸುದ್ದಿ

ವಾರದಲ್ಲಿ ಎರಡು ದಿನ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು ; ಮಾಜಿ ಸಚಿವ ಎಚ್.ವಿಶ್ವನಾಥ್ ಅಭಿಪ್ರಾಯ – ಕಹಳೆ ನ್ಯೂಸ್

ಬೆಂಗಳೂರು, ಎ.22  : ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ವಾರದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ವ್ಯಸನಿಗಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅಲ್ಲದೆ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಆಗುವುದನ್ನು ತಪ್ಪಿಸಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾತನಾಡಿದ ಅವರು, ಮದ್ಯ ವ್ಯಸನಿಗಳ ಆತ್ಮಹತ್ಯೆ ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು. ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಮದ್ಯ ಮಾರಾಟಕ್ಕೆ ವಾರದಲ್ಲಿ 2 ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಅವಕಾಶ ನೀಡಿ. ನಿಯಮ ಪಾಲಿಸದೇ ಇದ್ದರೆ ಲೈಸೆನ್ಸ್‌ ರದ್ದು ಪಡಿಸಿ. ಬಾರ್‌ ಹಾಗೂ ರೆಸ್ಟೋರೆಂಟ್‌ ಓಪನ್‌ ಆದರೆ, ಗಲಾಟೆ ನಡೆಯುತ್ತದೆ. ಆದರೆ, ಎಂಎಸ್‌ಐಎಲ್‌ ಹಾಗೂ ಬಾರ್‌ಗಳ ಮೂಲಕ ಪಾರ್ಸೆಲ್‌ ನೀಡಿದರೆ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾರ್‌ನವರು ಇದೀಗ ಜಾಸ್ತಿ ಮೊತ್ತಕ್ಕೆ ಮಾರಿ ಲಾಭಪಡೆದುಕೊಳ್ಳುತ್ತಿದ್ದಾರೆ. ವ್ಯಸನ ಅನ್ನುವುದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅವರ ಪ್ರಾಣ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಈ ವಿಚಾರವಾಗಿ ಸಿಎಂ ಬಿಎಸ್‌ವೈ ಅವರ ಗಮನಕ್ಕೆ ತರುತ್ತೇನೆ. ಮದ್ಯ ಮಾರಾಟ ಮಾಡಬೇಕೆಂಬುದು ಎಲ್ಲರ ಅಭಿಪ್ರಾಯವಿದೆ. ಆದರೆ, ಈ ಬಗ್ಗೆ ಹೇಳಲು ಯಾರಿಗೀ ಧೈರ್ಯವಿಲ್ಲ, ನಾನು ಹೇಳುತ್ತಿದ್ದೇನೆ ಎಂದರು.

ಪಾದರಾಯನಪುರ ಘಟನೆಯ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವೇ ಮಾಜಿ ಸಚಿವ ಜಮೀರ್ ಅಹಮದ್ ಅವರನ್ನು ಹೊರ ಹಾಕಬೇಕು. ಇವರೆಲ್ಲ ತಬ್ಲಿಘಿಗಳ ಪರವಾಗಿ ನಿಂತು ಕರ್ನಾಟಕವನ್ನು ತಬ್ಬಲಿ ಮಾಡುತ್ತಿದ್ದರು. ಇವತ್ತಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಇದ್ದಿದ್ದರೆ ಕರ್ನಾಟಕ ಮತ್ತೊಂದು ಅಮೆರಿಕಾ ಆಗುತ್ತಿತ್ತು. ಸಾಲು ಸಾಲು ಸಾವುಗಳು ಆಗುತ್ತಿದ್ದವು. ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ರಂಪ್‍ಗಳಾಗುತ್ತಿದ್ದರು ಎಂದು ಹೇಳಿದರು.