Sunday, January 19, 2025
ಸುದ್ದಿ

45 ವರ್ಷ ಕಟೀಲು ಮೇಳದಲ್ಲಿ ತಿರುಗಾಟನಡೆಸಿದ ಕಲಾವಿದನಿಗೆ ಸೂರುಕಟ್ಟಿಕೊಟ್ಟ ಪಟ್ಲ | ಪಟ್ಲ ಯಕ್ಷಾಶ್ರಯದ ದ್ವಿತೀಯ ಮನೆ ‘ ಶ್ರೀದೇವಿ ನಿಲಯ’ದ ಗೃಹಪ್ರವೇಶ ಸಮಾರಂಭ

ಮಂಗಳೂರು : ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇದರ ವತಿಯಿಂದ ಕಟೀಲು ಮೇಳದಲ್ಲಿ 45 ವರ್ಷಗಳ ಕಾಲ ಕಲಾಸೇವೆಗೈದು ಇದೀಗ ಅಶಕ್ತರಾಗಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯ ದ್ವಿತೀಯ ಮನೆಯನ್ನು ನಿರ್ಮಿಸಿಕೊಡುವುದ ಮೂಲಕ ಶ್ಲಾಗನೆಗೆ ಪಾತ್ರರಾಗಿದ್ದಾರೆ.

ಸದ್ರಿ ಗೃಹದ ಗೃಹಪ್ರವೇಶ ಸಮಾರಂಭವು ​ದಿನಾಂಕ 19.03.2018 ಸೋಮವಾರ, ಸಮಯ : ಪೂರ್ವಹ್ನ 7-01 ರ ವಿೂನಲಗ್ನ ಸುಮೂಹೂರ್ತದಲ್ಲಿ ಕಾಟುಕುಕ್ಕೆ ಅರೆಕ್ಕಾಡಿಯಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಆಮಂತ್ರಣ

ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕುಂಟಾರು ರವೀಶ ತಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ

ವರದಿ : ಕಹಳೆ ನ್ಯೂಸ್