Wednesday, January 22, 2025
ರಾಜಕೀಯಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಸಂಬಂಧ ನಾಳೆ ತೀರ್ಮಾನ ; ಅಲ್ಲಿವರೆಗೆ ಯಾವುದೇ ಸಡಿಲಿಕೆ ಇಲ್ಲ – ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ – ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್

ಮಂಗಳೂರು : ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಸಂಬಂಧ‌ ನಾಳೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ದ‌.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ತೀರ್ಮಾನ ಹೊರಬೀಳುವ ವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರ ಲಾಕ್ ಡೌನ್ ಸಡಿಲಿಸಿ ಸುತ್ತೋಲೆ ಹೊರಡಿಸಿದೆ.,ಆದರೆ ಹಾಟ್ ಸ್ಲಾಟ್ ಜಿಲ್ಲೆಯಾಗಿರೋ ಇಲ್ಲಿ ಅದನ್ನು ಹೇಗೆ ಅನ್ವಯಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷಿ ಮತ್ತು ತೋಟಗಾರಿಕೆಗೆ ಈಗಾಗಲೇ ಸಡಿಲ ‌ಮಾಡಿದ್ದೇವೆ.

ಜಲ್ಲಿಕಲ್ಲು, ಸಿಮೆಂಟ್ ಸೇರಿ ಬೇರೆ ಅಗತ್ಯಗಳಿಗೆ ಸಮಸ್ಯೆ ಇಲ್ಲ, ಸರ್ಕಾರಿ ಕಚೇರಿ ತೆರೆಯುವುದಕ್ಕೂ ಯಾವುದೇ ಸಮಸ್ಯೆ ಇಲ್ಲ, ಆದರೆ ಕೆಲ ಅಂಗಡಿಗಳನ್ನು ತೆರೆಯುವ ಬಗ್ಗೆ ಸುತ್ತೋಲೆಯಲ್ಲಿ ವಿನಾಯಿತಿ ಇದೆ. ಹೀಗಾಗಿ ಇದರ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಿ ವಿನಾಯಿತಿ ಬಗ್ಗೆ ತೀರ್ಮಾನ ಎಂದು ಹೇಳಿದ್ದಾರೆ.