Wednesday, January 22, 2025
ಸುದ್ದಿ

Breaking News : ರಾಷ್ಟ್ರೀಯವಾದಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮೇಲೆ ತಡರಾತ್ರಿ ಯುವಕಾಂಗ್ರೇಸ್ ಕಾರ್ಯಕರ್ತರಿಂದ ಹಲ್ಲೆ – ಕಹಳೆ ನ್ಯೂಸ್

ದೆಹಲಿ : ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಮೇಲೆ ನಿನ್ನೆ ಮಧ್ಯರಾತ್ರಿ ಹಲ್ಲೆ ಯುವ ಕಾಂಗ್ರೇಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಅರ್ನಾಬ್ ಹೇಳಿದ್ದಾರೆ.

ನಿನ್ನೆ ತಡರಾತ್ರಿ ತಮ್ಮ ಪತ್ನಿಯ ಜತೆ ಅವರು ಮನೆಯತ್ತ ಹೋಗುತ್ತಿದ್ದಾಗ, ಎರಡು ಬೈಕ್ ಗಳಲ್ಲಿ ಇಬ್ಬರು ಕಾರಿನ ಸಮಾನಾಂತರವಾಗಿ ಬೈಕ್ ಚಲಾಯಿ ಸುತ್ತಾ, ಕಾರಿನೊಳಗೆ ಯಾರಿದ್ದಾರೆ ಎಂದು ಇಣುಕಿ ಮೊದಲು ನೋಡಿದ್ದಾರೆ. ನಂತರ ಬೈಕನ್ನು ವೇಗವಾಗಿ ಮುಂದೆ ಚಲಾಯಿಸಿ ಆ ನಂತರ ಕಾರಿನ ಎದುರು ಬೈಕ್ ತಂದು ನಿಲ್ಲಿಸಿದರು. ಕಾರಿನ ಗ್ಲಾಸ್ ಗೆ ಜೋರಾಗಿ ಹೊಡೆದರು ಮತ್ತು ಕಪ್ಪು ಮಸಿ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟರಲ್ಲಿ ಅರ್ನಾಬ್ ಕಾರನ್ನು ಹಿಂಬಾಲಿಸಿ ಬರುವ ಅವರ ಭದ್ರತಾ ಸಿಬ್ಬಂದಿಗಳು ವ್ಯಕ್ತಿಗಳನ್ನು ಗಮನಿಸಿದರು ಎಂದು ಎಂದು ಅರ್ನಾಬ್ ಸ್ವತಃ ವಿಡಿಯೋದಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಘಟನೆ ನಡೆದ ನಂತರ, ಮುಂಬೈಯ NM ಜೋಶಿ ಮಾರ್ಗ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಅರ್ನಾಬ್ ಗೋಸ್ವಾಮಿ ಅವರು, ಈ ಹಲ್ಲೆಗೆ ಸೋನಿಯಾ ಅವರೇ ನೇರ ಕಾರಣ ಅಂದಿದ್ದಾರೆ.

ನಿನ್ನೆಯಷ್ಟೇ ಸಾಧು ಸಂತರ ಹತ್ಯೆಯ ಬಗೆಗೆ ಸೋನಿಯಾ ಗಾಂಧಿ ವಿರುದ್ಧ ಅರ್ನಾಬ್ ಗೋಸ್ವಾಮಿ ನೀಡಿದ ಹೇಳಿಕೆಯ ಮೇರೆಗೆ ಅರ್ನಾಬ್ ವಿರುದ್ಧ FIR ದಾಖಲಾಗಿತ್ತು.

ಅರ್ನಾಬ್ ಗೋಸ್ವಾಮಿ ಅವರು ಮೋದಿಯವರ ನೀತಿಯ ಪ್ರಬಲ ಪ್ರತಿಪಾದಕರಾಗಿದ್ದು, ಇದಕ್ಕೆ ಕಾರಣವಾಗಿದ ಎಂಬುದು ತಿಳಿಯಬೇಕಿದೆ.