Saturday, November 23, 2024
ಸುದ್ದಿ

ಕೊರೊನಾ ನಿಯಂತ್ರಣ ನಿಧಿಗೆ ಕರಾವಳಿ ಕಾಲೇಜು ಶಿಕ್ಷಣ ಸಂಸ್ಥೆಯಿಂದ 6 ಲಕ್ಷ ದೇಣಿಗೆ ಚೆಕ್‍ನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಅವರಿಗೆ ಹಸ್ತಾಂತರಿಸಿದ ಸಂಸ್ಥೆಗಳ ಸ್ಥಾಪಕ ಅಧ್ಯಕ ಶ್ರೀ ಎಸ್.ಗಣೇಶ್ ರಾವ್ – ಕಹಳೆ ನ್ಯೂಸ್

ಮಂಗಳೂರು: ದೇಶವನ್ನು ಕಾಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 6 ಲಕ್ಷ ರೂ. ಗಳ ದೇಣಿಗೆ ನೀಡಲಾಗಿದೆ.

4 ಲಕ್ಷ ರೂ. ಗಳ ಚೆಕ್‍ನ್ನು ಪ್ರಧಾನ ಮಂತ್ರಿಯವರ ಕೇರ್ಸ್ ನಿಧಿಗೆ ಹಾಗೂ 2 ಲಕ್ಷ ರೂ. ಗಳ ಚೆಕ್‍ನ್ನು ಕರ್ನಾಟಕ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ, ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ ಶ್ರೀ ಎಸ್.ಗಣೇಶ್ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಅವರಿಗೆ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾದಲ್ಲಿ ಸಂಕಷ್ಟದಲ್ಲಿ ಇರುವ ಬಡವರಿಗೆ 10 ಲಕ್ಷಕ್ಕೂ ಮಿಕ್ಕಿದ ವೆಚ್ಚದಲ್ಲಿ ಆಹಾರ ಕಿಟ್‍ಗಳನ್ನು ಈಗಾಗಲೇ ಕರಾವಳಿ ಸಮೂಹ ಸಂಸ್ಥೆ ವತಿಯಿಂದ ನೀಡಲಾಗಿದೆ. ಕರಾವಳಿ ಶಿಕ್ಷಣ ಸಂಸ್ಥೆ ಕಳೆದ 24 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಸಾಧನೆ ಜೊತೆಗೆ ಕಾರ್ಗಿಲ್ ಯುದ್ಧ, ಭೂಕಂಪ, ಬರ ನೆರೆ ಮುಂತಾದ ಸಂದರ್ಭದಲ್ಲಿ ಸಮಾಜದ ಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ಹಾಗೂ ವಸ್ತು ರೂಪದ ಸಹಾಯ ನೀಡಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.