Thursday, January 23, 2025
ಸುದ್ದಿ

ಮೆಡಿಕಲ್ ಶಾಪ್​ಗಳಲ್ಲಿ ಜ್ವರ, ಶೀತ,ಕೆಮ್ಮಿಗೆ ಮಾತ್ರೆ ಪಡೆಯುವವರ ವಿವರ ಸಂಗ್ರಹಿಸಲು ರಾಜ್ಯಸರ್ಕಾರ ಆದೇಶ – ಕಹಳೆ ನ್ಯೂಸ್

ಬೆಂಗಳೂರು, ಏ 23 : ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟ ನಂತರದ ದಿನಗಳಲ್ಲಿ ಪ್ಯಾರಸಿಟಮಲ್ ಮಾತ್ರೆ ಸೇವನೆ ಹೆಚ್ಚುತ್ತಿದ್ದು, ಇದು ಕೊರೊನಾ ಪೀಡಿತರ ಪತ್ತೆಗೆ ತಡೆಯನ್ನುಂಟು ಮಾಡುತ್ತಿದೆ. ಜ್ವರ ಬಂದ ತಕ್ಷಣ ಪ್ಯಾರಸಿಟಮಾಲ್ ಮಾತ್ರೆ ನುಂಗುವುದರಿಂದ ಜ್ವರದ ಲಕ್ಷಣ ಕಡಿಮೆಯಾಗುತ್ತದೆ ಹೊರತು, ಕೊರೊನಾ ವೈರಸ್ ದೇಹದಲ್ಲಿ ಅದು ನಿವಾರಣೆಯಾಗುವುದಿಲ್ಲ. ಹೀಗಾಗಿ ಕೊರೊನಾ ಉಲ್ಬಣವಾಗುವವರೆಗೂ ರೋಗಿಯ ದೇಹದಲ್ಲಿ ಪತ್ತೆಯಾಗದೆ ಇರುವ ಸಾಧ್ಯತೆ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಎಲ್ಲಾ ಮೆಡಿಕಲ್ ಶಾಪ್​ಗಳು ಹಾಗೂ ಆಸ್ಪತ್ರೆಯ ಮೆಡಿಕಲ್ಸ್​ನಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮಿಗೆ ಔಷಧಿ ಪಡೆಯುವವರ ವಿವರ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಸಂಬಂಧ ಇಂದು ಹೊಸ ಅಧಿಸೂಚನೆ ಜಾರಿ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ಯಾರಾಸಿಟಮಲ್, ಸಿರಪ್ ಹಾಗೂ ನೆಗಡಿ ಮಾತ್ರೆಗಳನ್ನು ಪಡೆದವರ ವಿವರ ಪಡೆಯಬೇಕು. ಎಲ್ಲರನ್ನ ಪತ್ತೆ ಮಾಡಲು ಅಡ್ರೆಸ್, ಫೋನ್​ ನಂಬರ್​ ಮತ್ತು ಲ್ಯಾಂಡ್​​ ಮಾರ್ಕ್ ಸಂಗ್ರಹಿಸಬೇಕು. ಅದನ್ನ ಜಿಲ್ಲಾ ಆರೋಗ್ಯಾಧಿಕಾರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಇಂದು ಆದೇಶಿಸಿದೆ.

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತವೂ, ಮೆಡಿಕಲ್ ಶಾಪ್ ಸಿಬ್ಬಂದಿಗಳು ವೈದ್ಯರ ಚೀಟಿ ಇಲ್ಲದೆ ಪ್ಯಾರಸಿಟಮಾಲ್ ಮಾತ್ರೆ ನೀಡದಂತೆ ಈ ಹಿಂದೆಯೇ ಸೂಚಿಸಲಾಗಿತ್ತು