Breaking News : ಬಂಟ್ವಾಳದ ಕೊರೊನಾ ಸೋಂಕಿತ ವೃದ್ದೆ ಸಾವು ; ಕೊರೊನಾಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿ – ಕಹಳೆ ನ್ಯೂಸ್
ಮಂಗಳೂರು, ಏ 23 : ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟು ಬಳಿಕ ಕೊರೊನಾ ದೃಢವಾದ ಬಂಟ್ವಾಳ ಮಹಿಳೆಯ ಅತ್ತೆಯ ಗಂಟಲ ದ್ರವ ಪರೀಕ್ಷೆಯ ವರದಿ ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಕೈ ಸೇರಿದ್ದು, ಅವರಿಗೂ ಕೋವಿಡ್- 19 ಸೋಂಕು ತಗುಲಿರುವುದು ಖಚಿತವಾಗಿದೆ, ಇದೀಗ ವೃದ್ದೆ ಸಾವನ್ನಪ್ಪಿದ್ದಾರೆ.
75 ವರ್ಷದವರಾಗಿರುವ ಮೃತ ಮಹಿಳೆಯ ಅತ್ತೆಯೂ ಮಾ.18 ರಿಂದ ಪಾರ್ಶ್ವವಾಯುಗೆ ಖಾಯಿಲೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆ ಹಾಗೂ ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಬಳಿಕ ಬುಧವಾರ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇಂದು ಇವರಲ್ಲೂ ಸೋಂಕು ದೃಢಪಟ್ಟಿತ್ತು. ಮೃತ ಮಹಿಳೆಯ ಮಕ್ಕಳ ಹಾಗೂ ಪತಿಯ ವರದಿ ನೆಗೆಟಿವ್ ಬಂದಿತ್ತು. 75 ವರ್ಷದ ವೃದ್ದೆಗೂ ಕೊರೊನಾ ಸೋಂಕು ತಗುಲಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿತ್ತು. ಈ ಪೈಕಿ 12 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ 4 ಪ್ರಕರಣಗಳಿವೆ. ಆದರೆ, ಈಗ ವೃದ್ದೆ ಮೃತಪಟ್ಟಿದ್ದು, ಮೃತರ ದಕ್ಷಿಣ ಕನ್ನಡದಲ್ಲಿ ಇದು ಎರಡನೇ ಮರಣವಾಗಿದೆ. ಅಲ್ಲಿಗೆ ಮೃತರ ಸಂಖ್ಯೆ ಎರಡಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.