Thursday, January 23, 2025
ರಾಜಕೀಯಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಸಡಿಲಿಕೆ ಇಲ್ಲ ; ಕಹಳೆ ನ್ಯೂಸ್ ಗೆ ಸಭೆಯ ನಿರ್ಧಾರದ ಕುರಿತು ಉಸ್ತುವಾರಿ ಸಚಿವ ಕೋಟ ಹೇಳಿಕೆ – ಕಹಳೆ ನ್ಯೂಸ್

ದ.ಕ. : ರಾಜ್ಯ ಸರಕಾರವು ಲಾಕ್ ಡೌನ್ ಸಡಿಲಿಕೆ ಆದೇಶ ನೀಡಿತ್ತು, ಆದರೆ, ದ.ಕ ಜಿಲ್ಲೆಯಲ್ಲಿ ಮೇ‌.3ರವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧಾರಕೈಗೊಳ್ಳಲಾಗಿದೆ ಎಂದು ಕಹಳೆನ್ಯೂಸ್ ಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ಸಭೆಯಲ್ಲಿ ಇಂತಹದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲೆಯಾದ್ಯಂತ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಯಲಿದ್ದು, ಹಾಲಿ‌ ನಿರ್ಬಂಧಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ರಾಜ್ಯ ಸರ್ಕಾರ ವಿಧಿಸಿದ ಸಡಿಲಿಕೆಗಳು ದ.ಕ ಜಿಲ್ಲೆಗೆ ಅನ್ವಯ ಇಲ್ಲ, ಹಾಗೂ ಹಾಟ್ ಸ್ಪಾಟ್ ಜಿಲ್ಲೆಯಾದ ಕಾರಣ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಸ್ಟಪಡಿಸಿದ್ದಾರೆ.