Wednesday, January 22, 2025
ಸುದ್ದಿ

ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನ ; ಅನ್ವರ್ ಕೆ.ಜಮಾದಾರ ಹಾಗೂ ನಿಝಾಮ್ ಅಬ್ದುಲ್ ಸಾಬ್ ಬಂಧನ – ಕಹಳೆ ನ್ಯೂಸ್

ಧಾರವಾಡ: ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿ ಇಬ್ಬರು ನಕಲಿ ಪತ್ರಕರ್ತರು ಸಿಕ್ಕಿಬಿದ್ದ ಘಟನೆ ನಗರದ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ನಡೆದಿದೆ.

ಅನ್ವರ್ ಕೆ.ಜಮಾದಾರ ಹಾಗೂ ನಿಝಾಮ್ ಅಬ್ದುಲ್ ಸಾಬ್ ಪಟೇಲ್ ಬಂಧಿತರು. ಆರೋಪಿಗಳು ತಾವು ಬೆಳಗಾವಿ ಜಿಲ್ಲೆಯ ನ್ಯೂಸ್ ಚಾನೆಲ್ ವರದಿಗಾರರು ಎಂದು ಹೇಳಿಕೊಂಡಿದ್ದರು. ಈ ಮೂಲಕ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿ, 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಯ ಮಾಲೀಕರು ಗರಗ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೆಎ-22, ಸಿ-3636 ಸಂಖ್ಯೆಯ ಕಾರಿನಲ್ಲಿ ಅನುಮತಿಯಿಲ್ಲದೇ ಬೆಳಗಾವಿ ಜಿಲ್ಲೆಯಿಂದ ಧಾರವಾಡದವರೆಗೆ ಪ್ರಯಾಣ ಮಾಡಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.