ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 29 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನ್ಲಿಯೇ 19 ಮಂದಿಗೆ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇಂದು ಬೆಳಗ್ಗೆ 11 ಮತ್ತು ಸಂಜೆ ಬುಲೆಟಿನ್ ನಲ್ಲಿ 8 ಸೇರಿ ಒಟ್ಟು 19 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಇಂದು ಬೆಳಗ್ಗೆ 18 ಮಂದಿಗೆ ಹಾಗೂ ಸಂಜೆ 11 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 18 ಜನರು ಮೃತಪಟ್ಟಿದ್ದು, 145 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಿಹಾರ ಮೂಲದ ಕಾರ್ಮಿಕ ಬೆಂಗಳೂರಿನ ಸೋಂಕಿತ 419ರ ಸಂಪರ್ಕದಿಂದ ಬರೋಬ್ಬರಿ 20 ಜನರಿಗೆ ಸೋಂಕು ಹರಡಿದೆ. ಇವರೆಲ್ಲರೂ ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಪ್ರರಕರಣಗಳ ವಿವರ
ಹೊಂಗಸಂದ್ರದ 26, 35,31,32,24 ವರ್ಷದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ, ಬೆಂಗಳೂರು ನಗರದ 49 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಗುಜರಾತ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 32 ವರ್ಷದ ವ್ಯಕ್ತಿ, ಬೆಳಗಾವಿ ರಾಯಭಾಗದ 10 ವರ್ಷದ ಬಾಲಕಿ, ಚಿಕ್ಕಬಳ್ಳಾಪುರದ 39 ವರ್ಷದ ವ್ಯಕ್ತಿ, ಬಾಗಲಕೋಟೆ ಮುಧೋಳದ 28 ಹಾಗೂ ಜಮಖಂಡಿಯ 46 ವರ್ಷದ ವ್ಯಕ್ತಿ, ವಿಜಯಪುರದ 17 ವರ್ಷದ ಯುವಕ ಮತ್ತು ಬೆಳಗಾವಿ ರಾಯಭಾಗದ 15 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಯಾದ ಸೋಂಕಿತರ ಪಟ್ಟಿ
ರೋಗಿ-464: ಮಂಡ್ಯ ಜಿಲ್ಲೆ ಮಳವಳ್ಳಿಯ 60 ವರ್ಷದ ಪುರುಷ. ರೋಗಿ ನಂಬರ್ 179ರ ಜೊತೆ ಸಂಪರ್ಕದಲ್ಲಿದ್ದರು.
ರೋಗಿ-465: ಬೆಂಗಳೂರು ನಗರದ 45 ವರ್ಷದ ಮಹಿಳೆ, ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ.
ರೋಗಿ-466: ಬೆಂಗಳೂರು ನಗರದ 50 ವರ್ಷದ ಪುರುಷ, ತೀವ್ರ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲು
ರೋಗಿ-467: ವಿಜಯಪುರದ 27 ವರ್ಷದ ಯುವಕ, ರೋಗಿ ನಂಬರ್ 221ರ ಜೊತೆ ಸಂಪರ್ಕದಲ್ಲಿದ್ದರು.
ರೋಗಿ-468: ಬಾಗಲಕೋಟೆ ಜಿಲ್ಲೆಯ ಮುಧೋಳದ 14 ವರ್ಷದ ಬಾಲಕ. ರೋಗಿ ನಂಬರ್ 380ರ ಜೊತೆ ಸಂಪರ್ಕದಲ್ಲಿದ್ದನು
ರೋಗಿ-469: ಬೆಂಗಳೂರು ನಗರದ 26 ವರ್ಷದ ಯುವಕ. ರೋಗಿ ನಂಬರ್ 419ರ ಜೊತೆ ಸಂಪರ್ಕದಲ್ಲಿದ್ದನು
ರೋಗಿ-470: ಬೆಂಗಳೂರಿನ 20 ಯುವಕ, ರೋಗಿ-419ರ ಸಂಪರ್ಕ ಹೊಂದಿದ್ದರು.
ರೋಗಿ-471 ಬೆಂಗಳೂರಿನ 22 ಯುವಕ, ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ-472: ಬೆಂಗಳೂರಿನ 58 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ-473: ಬೆಂಗಳೂರಿನ 38 ಪುರುಷ, ರೋಗಿ-419ರ ಸಂಪರ್ಕದಲ್ಲಿದ್ದರು.
ರೋಗಿ-474: ಬೆಂಗಳೂರಿನ 44 ಪುರುಷ, ರೋಗಿ-419ರ ಸಂಪರ್ಕದ ಹೊಂದಿದ್ದರು.