Wednesday, January 22, 2025
ಸುದ್ದಿ

23 ಸಾವಿರ ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ; ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್

ಮಂಗಳೂರು: ಮೀನುಗಾರರ ಸಾಲಮನ್ನಾ ಯೋಜನೆಗೆ ಹಣಕಾಸು ಇಲಾಖೆ 60 ಕೋಟಿ ರೂ ಬಿಡುಗಡೆ ಮಾಡಿದ್ದು, ಇದರಿಂದ 23 ಸಾವಿರ ಮೀನುರಾರರ ಸಾಲ ಮನ್ನಾ ಆಗಲಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಣಕಾಸು ಇಲಾಖೆ ಅಧಿಕೃತವಾಗಿ ಹಣ ಬಿಡುಗಡೆಗೆ ಆದೇಶ ಜಾರಿಯಾಗಿದ್ದು, ಈ ಸಾಲ ಮನ್ನಾ ಹಣ ಭೂಮಿ ಕೋಶದ ಮೂಲಕ ಸಾಲಗಾರರ ಖಾತೆಗೆ ಜಮಾ ಮಾಡಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕರೋನದ ಸಂಕಷ್ಟದ ದಿನಗಳಲ್ಲೂ ಕೂಡ ಮೀನುಗಾರರ ಹಿತರಕ್ಷಣೆಗಾಗಿ 60 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಮೀನುಗಾರರ ಪರವಾಗಿ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು