Wednesday, January 22, 2025
ಸುದ್ದಿ

Breaking News : ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ ಅಕ್ರಮ ಕಸಾಯಿಖಾನೆಗೆ ಧರ್ಮಸ್ಥಳ ಪೊಲೀಸರ ದಾಳಿ ; ಕಟುಕ ನಿಸಾರ್ ಹಾಗೂ ಸಹಚರರು ಪರಾರಿ – ಕಹಳೆ ನ್ಯೂಸ್

ಬೆಳ್ತಂಗಡಿ : ನೆರಿಯ ಗ್ರಾಮ ಇಟ್ಟಾಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ರೂ.15 ಸಾವಿರ ಮೌಲ್ಯದ ಮಾಂಸ ಹಾಗೂ ಇತರ ಸೋತ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿಯನ್ವಯ ನೆರಿಯಾ ಗ್ರಾಮದ ಇಟ್ಟಾಡಿ ಎಂಬಲ್ಲಿರುವ ನಿಸಾರ್ ಎಂಬಾತನು ತನ್ನ ಮನೆಯ ಸಮೀಪದ ತಾತ್ಕಾಲಿಕ ಶೆಡ್ಡಿನಲ್ಲಿ ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಸಲುವಾಗಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದಲ್ಲಿಗೆ ದಾಳಿ ನಡೆಸಿ ಸ್ಥಳದಿಂದ ಸುಮಾರು ರೂ. 15,000 ಮೌಲ್ಯದ ಮಾಂಸ, ಮತ್ತು ಮರದ ತುಂಡು, ಕತ್ತಿ, ಚೂರಿ, ತಕ್ಕಡಿ ಮತ್ತು ತೂಕದ ಬಟ್ಟುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ನಿಸಾರ್ ಮತ್ತು ಇನ್ನಿಬ್ಬರು ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 5,7, 9, 11 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ: 379 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು