Wednesday, January 22, 2025
ಸುದ್ದಿ

ಎಪ್ರಿಲ್ 24 ಸಾಮಾನ್ಯ ದಿನ ಅಲ್ಲ ; ಕಾವಿಹೊದ್ದ ಸಂತನ, ಶಂಕರಪೀಠದ ಮಹತ್ವ ಜಗತ್ತಿಗೆ ಸಾರಿದ ದಿನ ; ಇತಿಹಾಸದ ಪುಟ ಸೇರಿದ ಐತಿಹಾಸಿಕ ಕೇಶವಾನಂದ ಭಾರತೀ ಕೇಸ್ ನಿರ್ಣಯವಾದ ದಿನ – ಕಹಳೆ ನ್ಯೂಸ್

ಕೇಶವಾನಂದ ಭಾರತೀ ವರ್ಸಸ್‌ ಕೇರಳ ರಾಜ್ಯ ಸರಕಾರದ ಕೇಸ್‌ ಸ್ಟಡಿ ಬಗ್ಗೆ ಭಾರತದ ಕಾನೂನು ವಲಯದ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇಡೀ ಭಾರತದಲ್ಲಿಯೇ ಕಾನೂನು ಶಿಕ್ಷ ಣ ಆರಂಭವಾಗುವಲೇ ಈ ಕೇಸ್‌ ಸ್ಟಡಿ ಕಾನೂನು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಾರೆ. ಆದರೆ ಪ್ರಕರಣ ಏನೆಂಬುದು ಕಾನೂನು ಪುಸ್ತಕದಲ್ಲಿ ಉಲ್ಲೇಖವಿದ್ದರೂ ಈ ಕೇಶವಾನಂದ ಭಾರತೀ ಯಾರು ಎಲ್ಲಿಯವರು ಎಂಬುದು ಬಹುತೇಕ ಭಾರತೀಯರಿಗೆ ತಿಳಿದಿಲ್ಲ ಎನ್ನುವುದು ಸತ್ಯವಾಗಿದೆ, ಅಲ್ಲದೆ, ಎಪ್ರಿಲ್‌ 24 ದೇಶದ ಇತಿಹಾಸದಲ್ಲೇ ಇಂದು ದೊಡ್ಡ ಮೈಲಿಗಲ್ಲು ಎಂದರೂ ತಪ್ಪಾಗದು.

ಕೇರಳದ ಕಾಸರಗೋಡು ಜಿಲ್ಲೆಯ ಅನದಿ ದೂರದಲ್ಲಿರುವ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು. ಶಿಕ್ಷ ಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಎಡನೀರು ಮಠವು, ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಗುರುತಿಸಲ್ಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಡೀ ದೇಶದ ಇತಿಹಾಸದಲ್ಲಿ ಕೇಶವಾನಂದ ಭಾರತೀ ಕೇಸ್‌ ಭಾರತೀಯ ಸಂವಿಧಾನದ ತಿದ್ದುಪಡಿಗಳ ಮೇಲಿನ ಇತಿಮಿತಿಗಳು ನಿಯಂತ್ರಣದ ಬಗ್ಗೆ ಉಲ್ಲೇಖಿಸಿರುವುದಾಗಿದೆ. ಆ ಮೂಲಕ ಎಡನೀರು ಮಠವು ಖ್ಯಾತಿಯನ್ನು ಹೊಂದಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಏನೀದು ಕೇಶವಾನಂದ ಭಾರತೀ ಕೇಸು:

ಸ್ವಾತಂತ್ರ್ಯ ಭಾರತದ ಪ್ರಧಾನ ಒಂದು ಸಾಂವಿಧಾನಿಕ ಪ್ರಕರಣವಾಗಿದೆ, ಕೇಶವಾನಂದ ಭಾರತಿ ವರ್ಸಸ್‌ ಕೇರಳ ರಾಜ್ಯ ಸರಕಾರದ ಕೇಸು. ಕಾಸರಗೋಡು ಜಿಲ್ಲೆಯ ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು 1971ರಲ್ಲಿ ಕೇರಳ ಸರಕಾರದ ಭೂ ಸುಧಾರಣಾ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆಹೂಡಿದರು. ಆಸ್ತಿ ಮೂಲಭೂತವಾದುದೋ ಅಥವಾ ಇಲ್ಲವೋ ಎಂಬುದು ಈ ಕೇಸಿನ ಪ್ರಧಾನ ಅಂಶವಾಗಿತ್ತು. ಆ ಕೇಸಿನ ಬಗ್ಗೆ ಸುಪ್ರೀಂಕೋರ್ಟ್‌ ಸಂವಿಧಾನದ ತಿದ್ದುಪಡಿಗಳು ಸಂವಿಧಾನದ ಮೂಲ ನಿರ್ಮಾಣವನ್ನು ಕಡ್ಡಾಯವಾಗಿ ಗೌರವಿಸಬೇಕೆಂದು ಸಾರಿತು. ನ್ಯಾಯಾಲಯದ ಆದೇಶವು ಸಂವಿಧಾನದ ಕೆಲವು ಮೂಲ ವಿಷಯಗಳನ್ನು ತಿದ್ದುಪಡಿ ಮೂಲಕ ಬಲಾಯಿಸುವುದು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತ್ತು. ಅಂದರೆ ಭಾರತದ ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಯಾಗಬಹುದು, ಆದರೆ ಅದು ಸಂವಿಧಾನದ ಮೂಲಭೂತ ಸ್ವಭಾವವನ್ನು ಬದಲಾಯಿಸಬಾರದು ಎಂಬ ತೀರ್ಪು ಈ ಕೇಸಿನ ವಿಶೇಷತೆಯಾಗಿತ್ತು.

ಕೇರಳ ಸರಕಾರದ ಭೂಪರಿಷ್ಕರಣೆ ಪ್ರಕಾರ ಕಾಸರಗೋಡು ಸಮೀಪದ ಎಡನೀರು ಮಠದ ಆಸ್ತಿಯನ್ನು ಕೇರಳ ಸರಕಾರ ಸ್ವಾಧೀನಪಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಕರಣವಾಗಿತ್ತು. ಎಡನೀರು ಮಠಾಧೀಶ ಶ್ರೀಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ದಾವೆ ಹೂಡಿ ಭೂಪರಿಷ್ಕರಣೆ ಕಾಯ್ದೆ ಮಾನ್ಯತೆಯನ್ನು ಪ್ರಶ್ನಿಸಲಾಗಿತ್ತು. ಇದರೊಂದಿಗೆ ಧಾರ್ಮಿಕ ಹಕ್ಕು, ಮಠಗಳನ್ನು ನಡೆಸಲು ಇರುವ ಹಕ್ಕು, ಸಮಾನತೆಯ ಹಕ್ಕು, ಆಸ್ತಿ ಹಕ್ಕು ಮುಂತಾದ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಕುರಿತು ಉಲ್ಲೇಖಿಸಲಾಗಿತ್ತು. ಸುಮಾರು 68 ದಿನಗಳ ಕಾಲ ನಡೆದ ವಾದ ಪ್ರತಿವಾದ ನಡೆಯಿತು. ಕೇಸನ್ನು ಪ್ರಮುಖರಾದ ನಾನಿ ಪಾಲ್ಖಿವಾಲಾ ನಡೆಸಿದ್ದರು. ಹೈಕೋರ್ಟ್‌ನ 13 ಜಜ್‌ಗಳು ಒಳಗೊಂಡಿರುವ ಪೀಠವು ವಾದ ಆಲಿಸಿರುವುದು. ಇದು ಭಾರದ ಇತಿಹಾಸದಲ್ಲೇ ಬಹುದೊಡ್ಡ ಮಲಿಗಲ್ಲಾಗಿದೆ.