Wednesday, January 22, 2025
ರಾಜಕೀಯಸುದ್ದಿ

ಕೊರೋನಾ ಪರೀಕ್ಷೆಗೆ ಅಡ್ಡಿ: ಜೆಡಿಎಸ್ MLC ಶ್ರೀಕಂಠೇಗೌಡ ಅವರ ಪುತ್ರ ಕ್ರಿಷಿಕ್ ಗೌಡ ಮತ್ತು ಅವರ ಚೇಲಾಗಳ ವಿರುದ್ಧ ಕೇಸ್ ಬುಕ್..! – ಕಹಳೆ ನ್ಯೂಸ್

ಕೊರೋನಾ ಪರೀಕ್ಷೆಗೆ ಅಡ್ಡಿಪಡಿಸಿದ್ದಲ್ಲದೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾವರ್ತನೆ ತೋರೆದ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಹಾಗೂ ಅವರ ಚೇಲಾಗಳ ವಿರುದ್ಧ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡ್ಯ, (ಏ.25): ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಮಾಡಿರುವ ಜೆಡಿಎಸ್ MLC ಶ್ರೀಕಂಠೇ ಗೌಡ,ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341, 323, 501, 114, 269, 270 ಅಡಿಗಳಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಎಂ ಎಲ್ ಸಿ ಶ್ರೀಕಂಠೇಗೌಡ ಎ1 ಆರೋಪಿಯಾಗಿದ್ದರೇ, ಎ2 ಆರೋಪಿಯಾಗಿ ಶ್ರೀಕಂಠೇಗೌಡ ಅವರ ಪುತ್ರ ಕ್ರಿಷಿಕ್ ಗೌಡ ಆಗಿದ್ದಾರೆ. ಇವರೊಂದಿಗೆ ಎಂ.ಬಿ.ಚಂದ್ರಕಲಾವತಿ ಎ3, ಜಗದೀಶ್ ಎ4 ಮತ್ತು ರಾಜು ಆಲಿಯಾಸ್ ಪಿಳ್ಳೆ ಎ5 ಆರೋಪಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು