Wednesday, January 22, 2025
ಸುದ್ದಿ

ಪುತ್ತೂರಿನ ಸಂಪ್ಯದಲ್ಲಿ ಅಕ್ರಮ ಗೋ ಸಾಗಾಟ ; ಇಬ್ರಾಹಿಂ ಸಹಿತ ಕಟುಕರಿಬ್ಬರ ಹೆಡೆಮುರಿಕಟ್ಟಿ ಮೂರು ಗೋವುಗಳ ರಕ್ಷಣೆ ಮಾಡಿದ ಠಾಣಾಧಿಕಾರಿ ಉದಯ ರವಿ ನೇತೃತ್ವದ ಸಂಪ್ಯ ಪೋಲೀಸ್ ಸಿಬ್ಬಂದಿ – ಕಹಳೆ ನ್ಯೂಸ್

ಪುತ್ತೂರು: ಗೋ ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡುತ್ತಿರುವ ಪ್ರಕರಣ ಸಂಪ್ಯ ಪೊಲೀಸರ ಕೊವೀಡ್-19 ವಿಶೇಷ ರೌಂಡ್ಸ್ ವೇಳೆಯಲ್ಲಿ ಬೆಳಕಿಗೆ ಬಂದಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ಅವರಿಂದ ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಏ.25ರಂದು ಬೆಳಿಗ್ಗೆ ನಡೆದಿದೆ.

ಕುಂಬ್ರದ ಚಂದ್ರಹಾಸ ಮತ್ತು ಗಟ್ಟಮನೆ ನಿವಾಸಿ ಇಬ್ರಾಹಿಂ ಎಂಬವರು ಬಂಧಿತ ಆರೋಪಿಗಳು. ಸಂಪ್ಯ ಎಸ್.ಐ ಉದಯ ರವಿ ಮತ್ತು ಎ.ಎಸ್.ಐ ಚಕ್ರಪಾಣಿ ಮತ್ತು ಸಿಬಂದಿಗಳು ಕೋವಿಡ್ -19 ವಿಶೇಷ ರೌಂಡ್ಸ್ ನಡೆಸುತ್ತಿದ್ದ ವೇಳೆ ಅಕ್ರಮ ಗೋ ಸಾಗಾಟ ಪ್ರಕರಣ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಮಿನಿ ಗೂಡ್ಸ್ ಲಾರಿಯಲ್ಲಿ ಗೋಸಾಗಾಟ ಮಡುತ್ತಿದ್ದ ಚಂದ್ರಹಾಸ ಮತ್ತು ಇಬ್ರಾಹಿಂ ಎಂಬವರು ಬಂಧಿಸಿದ್ದಾರೆ. ಅವರಿಂದ ಮೂರು ಹೋರಿಗಳನ್ನು ರಕ್ಷಣೆ ಮಾಡಿದ್ದು, ಮಿನಿ ಗೂಡ್ಸ್ ಲಾರಿಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು