Wednesday, January 22, 2025
ಸುದ್ದಿ

ಸುಬ್ರಹ್ಮಣ್ಯದ ಏನೆಕಲ್ಲಿನಲ್ಲಿ ಕಳ್ಳಭಟ್ಟಿ ಮಾರಾಟ ಯತ್ನ ; ಮೋಟಾರು ಸೈಕಲ್ ಸಹಿತ ಇಬ್ಬರು ಪೊಲೀಸ್ ವಶ – ಕಹಳೆ ನ್ಯೂಸ್

ಏನೆಕಲ್ಲಿನಲ್ಲಿ ಕಳ್ಳಭಟ್ಟಿ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏನೆಕಲ್ಲು ಗ್ರಾಮದ ತೋಟದಮನೆ ಸುಧೀರ್ (33), ಪುರ್‍ಲುಪ್ಪಾಡಿ ಮನೆ ಪ್ರವೀಣ್ (3೦) ಬಂಧಿತ ಆರೋಪಿಗಳು. ಎ. ೨೪ರಂದು ಮುಂಜಾನೆ ಏನೆಕಲ್ಲು ಬಸ್ ನಿಲ್ದಾಣದ ಬಳಿ ಕಳ್ಳಭಟ್ಟಿ ಸಾರಾಯಿ ಕ್ಯಾನಿನಲ್ಲಿ ತುಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಕಳ್ಳಭಟ್ಟಿ ಸಹಿತ ಇಬ್ಬರನ್ನು ವಶಕ್ಕೆ ಪಡೆದರು. ಅವರ ಜೊತೆಗಿದ್ದ ಮೋಟಾರ್ ಸೈಕಲ್ KA 21 Q 7611 ನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು