Thursday, January 23, 2025
ಸುದ್ದಿ

Breaking News : ವಿದೇಶದಲ್ಲಿರುವ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ವಾಪಾಸ್‌ ಕರೆತರಲು ಸಜ್ಜಾಗುತ್ತಿದೆ ಕೇಂದ್ರ ಸರ್ಕಾರ..! ಕಾದಿದೆಯಾ ಮತ್ತೊಂದು ಕಂಟಕ..? ಸರಕಾರದ ನಿರ್ಧಾರ ಸರಿಯೇ..? ಕಹಳೆ ನ್ಯೂಸ್

ನವದೆಹಲಿ, ಎ.26 : ಕೊರೊನಾ ಕಾರಣದಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು ಅಂತರ್‌ ರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಹಲವು ಭಾರತೀಯರು ವಿದೇಶದಲ್ಲೇ ಉಳಿದಿದ್ದು ಸರ್ಕಾರ ಭಾರತೀಯರನ್ನು ವಿದೇಶದಿಂದ ವಿಶೇಷ ವಿಮಾನದ ಮೂಲಕ ಕರೆತರಲು ಸರ್ಕಾರ ಸಜ್ಜಾಗುತ್ತಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಚಾರಕ್ಕೆ ಸಂಬಂಧಿಸಿ ಒಂದು ವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏಪ್ರಿಲ್ 24 ರ ಶುಕ್ರವಾರದಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಲಾಕ್‌ಡೌನ್‌ ಮುಗಿದ ಬಳಿಕ ವಿಶೇಷ ವಿಮಾನದಲ್ಲಿ ವಿದೇಶದಿಂದ ಕರೆತರಲಾಗುವ ಭಾರತೀಯರಿಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಯ ವ್ಯವಸ್ಥೆ ಹಾಗೂ ಕ್ವಾರಂಟೈನ್‌ನಲ್ಲಿ ಇರಿಸಲು ಬೇಕಾದ ಸೂಕ್ತ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿದ್ದರು.

ಮೇ ಮೂರರವರೆಗೆ ದೇಶದಲ್ಲಿ ಚಾಲ್ತಿಯಲ್ಲಿ ಇರಲಿರುವ ಲಾಕ್‌ಡೌನ್‌ನ್ನು ಆ ಬಳಿಕ ಹಿಂತೆಗೆಯುವ ಯಾವುದೇ ಅಧಿಕೃತ ಪ್ರಕಟಣೆಯನ್ನು ಸರ್ಕಾರ ಈವರೆಗೆ ನೀಡಿಲ್ಲ. ಆದರೆ ಕೆಲವು ವಲಯಗಳಿಗೆ ಲಾಕ್‌ಡೌನ್‌ ಸಡಿಲಿಕೆ ಮಾಡುವ ಸಾಧ್ಯತೆಯಿದೆ.

ಲಾಕ್‌ಡೌನ್ ಸಮಯದಲ್ಲಿ ಜಾರಿಯಲ್ಲಿರುವ ಹಲವು ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದು ಈ ಕುರಿತು ಮುಖ್ಯಮಂತ್ರಿ ಅಭಿಪ್ರಾಯ ಪಡೆಯಲು ಪ್ರಧಾನಿ ಮೋದಿ ಅವರು ಏಪ್ರಿಲ್ 27 ಸೋಮವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ವಿದೇಶದಲ್ಲಿರುವ ಭಾರತೀಯರನ್ನು ದೇಶಕ್ಕೆ ವಾಪಾಸ್‌ ಕರೆದುಕೊಂಡು ಬರಲು ಇದು ಸರಿಯಾದ ಸಮಯ ಹಾಗೂ ಇದು ಬಹಳ ಹೊಣೆಗಾರಿಕೆಯ, ದೊಡ್ಡದಾದ ಕಾರ್ಯ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ವರದಿಯಾಗಿದೆ.

ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತಕ್ಕೆ ಮರಳಲು ಬಯಸುವ ಜನರ ನಿರ್ಧಾರ ಮಾಡಲು ಈಗಾಗಲೇ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಸರ್ಕಾರ ಅಲ್ಲಿಯೇ ಬಾಕಿಯಾಗಿರುವ ಭಾರತೀಯರನ್ನು ಮಾತ್ರವಲ್ಲದೆ ಭಾರತಕ್ಕೆ ವಾಪಾಸ್‌ ಆಗಲು ಬಯಸುವ ಇತರ ಭಾರತೀಯರನ್ನು ಕರೆತರಲು ಅಂದಾಜಿಸಿದೆ. ಕೇರಳ ಒಂದು ರಾಜ್ಯದಲ್ಲೇ ಸುಮಾರು ಒಂದು ಲಕ್ಷದಷ್ಟು ಜನರು ಮನೆಯವರನ್ನು ಭೇಟಿಯಾಗಲು ಭಾರತಕ್ಕೆ ಬರಲು ಬಯಸಿದ್ದಾರೆ. ಇನ್ನು ದೆಹಲಿ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ವಾಪಾಸ್‌ ಆಗುವ ಸಾಧ್ಯತೆಯಿದೆ. ಅದೇ ಕಾರಣದಿಂದಾಗಿ ವಿದೇಶಾಂಗ ಸಚಿವಾಲಯದಿಂದ ಪ್ರತ್ಯೇಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ.

ಇನ್ನು ಹಲವು ರಾಜ್ಯಗಳು ವಿದೇಶದಿಂದ ಭಾರತಕ್ಕೆ ಮರಳುವ ಭಾರತೀಯರಿಗೆ ಸ್ಥಳಾವಕಾಶ ಕಲ್ಪಿಸಲು ಮೂಲಸೌಕರ್ಯಗಳು ಲಭ್ಯವಿಲ್ಲ ಎಂದು ಹೇಳಿದ್ದು ಈವರೆಗೆ ಅವರಿಗೆ ಬೇಕಾದ ಯಾವುದೇ ವೈದ್ಯಕೀಯ ಅಥವಾ ಕ್ವಾರಂಟೈನ್‌ ವ್ಯವಸ್ಥೆಯಾಗಿಲ್ಲ.

ರಾಜೀವ್ ಗೌಬಾ ಅವರು ರಾಜ್ಯಗಳ ಉನ್ನತ ಪೌರಕಾರ್ಮಿಕರೊಂದಿಗಿನ ಸಭೆಯಲ್ಲಿ ಮೇ 3 ರ ನಂತರ ಹಿಂತಿರುಗುವ ಭಾರತೀಯರಿಗೆ ಅಗತ್ಯವಾದ ಸೌಲಭ್ಯಗಳನ್ನು ಸೃಷ್ಟಿಸಲು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ಇದೊಂದು ಮಹತ್ತರವಾದ ಕಾರ್ಯ ಎಂದು ಹೇಳಿದ್ದರು.

ಇನ್ನು ವಿದೇಶದಿಂದ ವಾಪಾಸ್‌ ಕರೆದುಕೊಮಡು ಬರಲಾಗುವ ಭಾರತೀಯರ ರಾಜ್ಯಕ್ಕೆ ಹತ್ತಿರವಾಗಿರುವ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗುವುದು. ಇದರಿಂದಾಗಿ ಆಂತರಿಕವಾಗಿ ಅವರಿಗೆ ಪ್ರಯಾಣ ಕಡಿಮೆಯಾಗುತ್ತದೆ. ಹಾಗೆಯೇ ವಿದೇಶದಿಂದ ಬರುವ ಭಾರತೀಯರನ್ನು ನೇರವಾಗಿ ಕ್ಯಾರೆಂಟೈನ್ ಕೇಂದ್ರಗಳಿಗೆ ಕರೆದೊಯ್ದು ಕನಿಷ್ಠ 14 ದಿನಗಳು ಅವರನ್ನು ಅಲ್ಲಿ ಇರಿಸಬೇಕು ಎಂದು ರಾಜ್ಯಗಳಿಗೆ ತಿಳಿಸಲಾಗಿದೆ.

ಮಾರ್ಚ್ 22 ರಂದು ದೇಶದಲ್ಲಿ ಅಂತರ್‌ ರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದ್ದ ಈ ಬಳಿಕ ವಿದೇಶದಲ್ಲಿರುವ ಭಾರತೀಯರು ತಮ್ಮನ್ನು ದೇಶಕ್ಕೆ ವಾಪಾಸ್‌ ಕರೆದೊಯ್ಯುವಂತೆ ಒತ್ತಡ ಹೇರಿದ್ದಾರೆ.

ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತಮ್ಮ ಗಲ್ಫ್‌ ಮತ್ತು ಸೌದಿ ಅರೇಬಿಯಾದ ಸಹವರ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಭಾರತೀಯರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹಾಗೆಯೇ ಅವರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ. ಸಾಧ್ಯವಾದಷ್ಟ್ರು ಶೀಘ್ರವಾಗಿ ಅವರನ್ನು ಭಾರತಕ್ಕೆ ವಾಪಾಸ್‌ ಕರೆದುಕೊಂಡು ಬರಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗಲ್ಫ್‌ ಮತ್ತು ಸೌದಿ ಅರೇಬಿಯಾದಲ್ಲಿ 9 ದಶಲಕ್ಷಕ್ಕೂ ಅಧಿಕ ಭಾರತೀಯರು ಇದ್ದು ಭಾರತೀಯರ ಮನವಿಯ ಮೇರೆಗೆ ಈ ರಾಷ್ಟ್ರಗಳಿಗೆ ಹೆಚ್ಚಿನ ಆದ್ಯತೆಯ ಮೇಲೆ ಸರ್ಕಾರವು ವೈದ್ಯಕೀಯ ಸರಬರಾಜು ಮತ್ತು ಸಹಾಯವನ್ನು ನೀಡಿದೆ.