Thursday, January 23, 2025
ಸುದ್ದಿ

ಹುಷಾರ್..! ಕೊರೊನಾಗೆ ಮೃತರಾದವರ ಅಂತ್ಯಸಂಸ್ಕಾರಕ್ಕೆ ಅಡ್ಡಿ ಮಾಡಿದ್ರೆ 3 ವರ್ಷ ಜೈಲು..! – ಕಹಳೆ ನ್ಯೂಸ್

ಚೆನ್ನೈ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ತಮಿಳುನಾಡಿನಲ್ಲಿ 3 ವರ್ಷ ಜೈಲು ಶಿಕ್ಷೆಯಾಗಲಿದೆ.

ಕೋವಿಡ್-19 ಸೋಂಕಿನಿಂದ ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರ ಅಥವಾ ಹೂಳಲು ಜನ ವಿರೋಧ ವ್ಯಕ್ತಿಪಡಿಸಿದರೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರಣಾಂತಿಕ ಕೋವಿಡ್-19 ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವುದು ಕ್ರಿಮಿನಲ್ ಅಪರಾಧ ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡು ಸಾರ್ವಜನಿಕ ಕಾಯ್ದೆ 1939ರ ಸೆಕ್ಷನ್ 74ರ ಪ್ರಕಾರ ಅಡ್ಡಿಪಡಿಸಿದರೆ ಕನಿಷ್ಟ 1 ವರ್ಷ ಜೈಲು ಅಥವಾ ಗರಿಷ್ಟ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಕೊರೊನಾ ಸೋಂಕಿಗೆ ಇಬ್ಬರು ವೈದ್ಯರು ಬಲಿಯಾಗಿದ್ದರು. ಈ ವೈದ್ಯರ ಅಂತ್ಯಸಂಸ್ಕಾರಕ್ಕೆ ಜನ ಅಡ್ಡಿ ಪಡಿಸಿದ್ದರು. ಅಷ್ಟೇ ಅಲ್ಲದೇ ಅಲ್ಲಿದ್ದ ಆರೋಗ್ಯ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿದ್ದರು. ಕೊನೆಗೆ ಪೊಲೀಸರ ಸಹಕಾರದಿಂದ ಬೇರೆ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.