Recent Posts

Sunday, January 19, 2025
ಸುದ್ದಿ

ಪುತ್ತೂರು: ವಿದ್ಯುತ್ ಬಿಲ್ ಕಟ್ಟಲು ಏಪ್ರಿಲ್ 29ರಂದು ಗೋಳಿತೊಟ್ಟಿನಲ್ಲಿ ತಾತ್ಕಾಲಿಕ ನಗದು ಮುಂಗಟ್ಟೆ- ಕಹಳೆ ನ್ಯೂಸ್

ಪುತ್ತೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಪುತ್ತೂರು ಪಟ್ಟಣಕ್ಕೆ ತೆರಳಿ ವಿದ್ಯುತ್ ಬಿಲ್ಲು ಪಾವತಿಸಲು ಸಾಧ್ಯವಾಗದ ಹಾಗೂ ಆನ್ಲೈನ್ ಮುಖಾಂತರ ಪಾವತಿ ವ್ಯವಸ್ಥೆಯನ್ನು ಅವಲಂಬಿಸದ ಉಪ್ಪಿನಂಗಡಿ – ಗೋಳಿತೊಟ್ಟು ಗ್ರಾಮೀಣ ಪ್ರದೇಶದ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಬಿಲ್ಲು ಪಾವತಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೇ ತಿಂಗಳ ದಿನಾಂಕ 29.04.2020 ಬುಧವಾರ ಬೆಳಿಗ್ಗೆ 9 ರಿಂದ 12 ಗಂಟೆಯ ತನಕ ಗೋಳಿತೊಟ್ಟು ಜಂಕ್ಷನ್ ನಲ್ಲಿ ತಾತ್ಕಾಲಿಕ ನಗದು ಮುಂಗಟ್ಟೆ ತೆರೆಯಲಾಗುವುದು ಎಂದು ಮೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ತಿಳಿಸಿದ್ದಾರೆ.

ಇದರಿಂದ ಗೋಳಿತೊಟ್ಟು ಪ್ರದೇಶ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಸುಲಭ ರೀತಿಯಲ್ಲಿ ಬಿಲ್ ಪಾವತಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು