Recent Posts

Sunday, January 19, 2025
ಸುದ್ದಿ

ಮಂಗಳೂರು: ತಾಯಿ ಮಗನಿಗೆ ಕೊರೊನಾ – ಶಕ್ತಿನಗರದ ಕಕ್ಕೆಬೆಟ್ಟು ಸೀಲ್ ಡೌನ್-ಕಹಳೆ ನ್ಯೂಸ್

ಮಂಗಳೂರು:ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ೮೦ ವರ್ಷದ ಮಹಿಳೆ ಹಾಗೂ ಆಕೆಯ ೪೫ ವರ್ಷದ ಪುತ್ರನಲ್ಲಿ ಸೋಂಕು ದೃಢವಾದ ಹಿನ್ನಲೆಯಲ್ಲಿ ಇವರಿರುವ ಶಕ್ತಿನಗರದ  ಕಕ್ಕೆ ಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಮನೆಯಿಂದ ಹೊರಬರದಂತೆ  ಎಚ್ಚರಿಕೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಂಕಿತರ ವಾಸವಾಗಿದ್ದ ಮಬೆಯಿಂದ ಸುಮಾರು 200 ಮೀ ವ್ಯಾಪ್ತಿಯನ್ನು ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು, ಸುಮಾರು 22ಕ್ಕೂ ಅಧಿಕ ಮನೆಗಳ 120ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್ ಇರುತ್ತದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ 5 ಅಂಗಡಿ ಮುಂಗಟ್ಟುಗಳಿವೆ್

ಜಾಹೀರಾತು
ಜಾಹೀರಾತು
ಜಾಹೀರಾತು

ಕಕ್ಕೆಬೆಟ್ಟುವಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 4800 ಮನೆ, ೧೩೦೦ಅಂಗಡಿ ಮುಂಗಟ್ಟು, 73,000 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಉರ್ವ ಮಾರ್ಕೇಟ್ ಉತ್ತರಕ್ಕೆ ಪದವಿನಂಗಡಿ, ದಕ್ಷಿಣಕ್ಕೆ ಬಂಟ್ಸ್ ಹಾಸ್ಟಲ್ ಜಂಕ್ಷನ್ ಒಳಪಡುತ್ತದೆ.