Saturday, November 23, 2024
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆ ಆರೆಂಜ್ ಝೋನ್ ; ಮಂಗಳೂರು, ಪುತ್ತೂರು ಬಂಟ್ವಾಳ ತಾಲೂಕುಗಳು ಜಿಲ್ಲೆಯ ಹಾಟ್ ಸ್ಪಾಟ್ – ಕಹಳೆ ನ್ಯೂಸ್

ಮಂಗಳೂರು: ಏ 27 : ಕೊರೊನಾ ಪ್ರಕರಣ ಹಿನ್ನೆಲೆ ದ.ಕ ಜಿಲ್ಲೆ ಆರೆಂಜ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ರೆಡ್ ಝೋನ್ ನಲ್ಲಿದ್ದ ದ.ಕ. ಜಿಲ್ಲೆ ಇದೀಗ ಆರೆಂಜ್ ಝೋನ್ ಆಗಿ ಮಾರ್ಪಾಡಾಗಿದೆ. ಇನ್ನು ಉಡುಪಿ ಜಿಲ್ಲೆ ಹಸಿರು ಝೋನ್ ಎಂದು ಘೋಷಣೆ ಮಾಡಲಾಗಿದೆ.

ಈ ಹಿಂದೆ ದ.ಕ. ಜಿಲ್ಲೆ ಅಪಾಯ ವಲಯವೆಂದು ಘೋಷಣೆಯಾಗಿತ್ತು. ಆದರೆ ಸದ್ಯ ಅಪಾಯ ವಲಯದಿಂದ ಸೇಫ್ ವಲಯವೆಂದು ಘೋಷಣೆಯಾಗಿದ್ದು, ಜನತೆಯ ಆತಂಕ ಸ್ವಲ್ಪ ಮಟ್ಟಿಗೆ ದೂರವಾದಂತಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಸದ್ಯ ಯಾವುದೇ ಆಕ್ಟಿವ್ ಪ್ರಕರಣಗಳಿಲ್ಲದ ಕಾರಣ ಹಸಿರು ವಲಯ ಎಂದು ಘೋಷಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದ.ಕ. ಜಿಲ್ಲೆಯೊಳಗೆ ಇರುವ ತಾಲೂಕುಗಳನ್ನು ಕೂಡ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ ವಿಭಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ, ಪುತ್ತೂರು, ಮಂಗಳೂರು ಆರೆಂಜ್ ಝೋನ್:
ಬಂಟ್ವಾಳ, ಪುತ್ತೂರು, ಮಂಗಳೂರು ತಾಲೂಕು ಆರೆಂಜ್ ಝೋನ್ ಎಂಬುವುದಾಗಿ ಗುರುತಿಸಲಾಗಿದೆ. ಉಳ್ಳಾಲ, ಮೂಡುಬಿದಿರೆ, ಸುಳ್ಯ, ಬೆಳ್ತಂಗಡಿ, ಕಡಬಗಳಾಲ್ಲಿ ಯಾವುದೇ ಆಕ್ಟಿವ್ ಪ್ರಕರಣಗಳಿಲ್ಲ ಕಾರಣ ಆ ತಾಲೂಕುಗಳನ್ನು ಗ್ರೀಸ್ ಝೋನ್ ಎಂಬುವುದಾಗಿ ಘೋಷಣೆ ಮಾಡಲಾಗಿದೆ.

ತಾಲೂಕಿನಲ್ಲಿ 1 ಕೇಸ್ ಗಳಿದ್ದರೆ ಅದನ್ನು ಯಲ್ಲೋ ಝೋನ್ ಎಂದು ಗುರುತಿಸಲಾಗುತ್ತದೆ. 2 ರಿಂದ 5 ಆಕ್ಟಿವ್ ಕೇಸ್ ಗಳಿದ್ದರೆ ಆರೆಂಜ್ ಝೋನ್, 5 ಮತ್ತು ಅದಕ್ಕಿಂತ ಹೆಚ್ಚೂ ಆಕ್ಟಿವ್ ಕೇಸ್ ಗಳಿದ್ದರೆ ರೆಡ್ ಝೋನ್ ಎಂಬುವುದಾಗಿ ಘೋಷಣೆ ಮಾಡಲಾಗುತ್ತದೆ.

ಇನ್ನು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮೂಲದ ಇಬ್ಬರಲ್ಲಿ ಪಾಸಿಟಿವ್ ಕೇಸುಗಳಿದ್ದು, ಬಂಟ್ವಾಳದ ಮೂವರು ಹಾಗೂ ಮಂಗಳೂರಿನಲ್ಲಿ ಇಬ್ಬರು ಸೋಂಕಿತರಿರುವ ಕಾರಣ ಈ ತಾಲೂಕುಗಳು ಆರೆಂಜ್ ಝೋನ್ ಗಳಾಗಿವೆ.