Saturday, November 23, 2024
ಸುದ್ದಿ

ವಿನಾಯಕ ಫ್ರೆಂಡ್ ಬಲ್ನಾಡು ಸದಸ್ಯರಿಂದ ; ಜನರ ಜೀವ ರಕ್ಷಣೆಗೆ ನಿಂತಿರುವ ವೈದ್ಯರಿಗೆ, ಆರಕ್ಷಕರಿಗೆ, ಸರಕಾರಿ ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ಹಾಗು ಮಾಧ್ಯಮದವರಿಗೆ ತಂಪು ಪಾನೀಯ ವಿತರಣೆ-ಕಹಳೆ ನ್ಯೂಸ್

ಭಾರತದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ಸನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದೆ. ಲಾಕ್‌ಡೌನ್ ಕಾರಣದಿಂದ, ಪ್ರತೀ ವರ್ಷ ಏಪ್ರೀಲ್ 28ನೇ ತಾರೀಖಿನಂದು ನಡೆಯುತ್ತಿದ್ದ ಬಲ್ನಾಡು ದೈವಗಳ ನೇಮೋತ್ಸವನ್ನು ರದ್ದುಗೊಳಿಸಿ ದೈವಗಳಿಗೆ ತಂಬಿಲ ಸೇವೆಯನ್ನು ಮಾಡಲಾಗಿದೆ.

ಪ್ರತೀ ವರ್ಷ ನೇಮೋತ್ಸವ ಸಂದರ್ಭದಲ್ಲಿ ವಿನಾಯಕ ಫ್ರೆಂಡ್ ಬಲ್ನಾಡು ಚಾರಿಟೇಬಲ್ ಟ್ರಸ್ಟಿನ ಸದಸ್ಯರು ನೇಮೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪಾನೀಯ ವಿತರಿಸುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದೆವು ಈ ಬಾರಿ ನೇಮೋತ್ಸವ ರದ್ದಾಗಿರುವುದರಿಂದ, ದೇವಿಗೆ ಸಲ್ಲುವ ಸೇವೆ ನಿಲ್ಲಬಾರದೆಂಬ ದೃಷ್ಟಿಯನ್ನಿಟ್ಟುಕೊಂಡು, ಕೊರೋನ ಅಟ್ಟಹಾಸದ ನಡುವೆ ಸಾಮಾನ್ಯ ಜನರ ಜೀವ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ವೈದ್ಯರಿಗೆ, ಆರಕ್ಷಕರಿಗೆ, ಸರಕಾರಿ ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ಹಾಗು ಮಾಧ್ಯಮದವರಿಗೆ ಮತ್ತು ರಸ್ತೆ ಬದಿಯಲ್ಲಿರುವ ನಿರ್ಗತಿಕರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಹಕಾರದೊಂದಿಗೆ ತಂಪು ಪಾನೀಯ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು